ಹೊಸೂರು;ಹೆರಿಗೆ ಮಾಡಿಸುವ ವೇಳೆ ನವಜಾತ ಶಿಶುವಿನ ಕೈ ಮುರಿದ ಘಟನೆ ಕೃಷ್ಣಗಿರಿ ಜಿಲ್ಲೆ ಉದ್ದನಪಲ್ಲಿಯಲ್ಲಿ ನಡೆದಿದೆ.
ಹೊಸೂರು ನಗರದ ಕೊತ್ತೂರಿನ ಕೂಲಿಕಾರ್ಮಿಕ ಶಿವಕುಮಾರ್ ಎಂಬುವರ ಪತ್ನಿ ವಸಂತಿ ಅವರಿಗೆ ಬುಧವಾರ ಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು ತಕ್ಷಣ ಅವರನ್ನು ಹತ್ತಿರದ ಉದ್ಧನಪಲ್ಲಿ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು.ಈ ವೇಳೆ ಆಸ್ಪತ್ರೆ ವೈದ್ಯೆ ಗೈರಾಗಿದ್ದರು.
ದಾದಿಯರೇ ರಿಸ್ಕ್ ತೆಗೆದುಕೊಂಡು ಹೆರಿಗೆ ಮಾಡಿಸಿದ್ದರು. ಈ ವೇಳೆ ಮಗುವಿನ ಕೈ ಮುರಿದಿದ್ದು, ಮಗುವಿನ ಆರೋಗ್ಯ ಸ್ಥಿತಿ ಬಿಗಡಾಯಿಸಿದೆ. ತಕ್ಷಣ ಆಂಬುಲೆನ್ಸ್ ಮೂಲಕ ಹೊಸೂರು ಸರ್ಕಾರಿ ಆಸ್ಪತ್ರೆಗೆ ಮಗುವನ್ನು ರವಾನಿಸಲಾಗಿದೆ.
ಮಗುವಿನ ಕೈ ಮುರಿದಿರುವ ಸುದ್ದಿ ತಿಳಿದು ಆಸ್ಪತ್ರೆ ಆವರಣದಲ್ಲಿ ಪೋಷಕರು ಗಲಾಟೆ ಮಾಡಿದರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿ ಕೇಸ್ ದಾಖಲಿಸಿಕೊಂಡಿದ್ದಾರೆ.