Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ರಾಜ್ಯದಲ್ಲಿ ಇನ್ಮುಂದೆ ‘ಆನ್ಲೈನ್ ಬೆಟ್ಟಿಂಗ್’ ಗೆ ನಿಷೇಧ : ಹೊಸ ಮಸೂದೆ ಸಿದ್ಧಪಡಿಸಿದ ಸರ್ಕಾರ
    ಇತ್ತೀಚಿನ ಸುದ್ದಿ

    ರಾಜ್ಯದಲ್ಲಿ ಇನ್ಮುಂದೆ ‘ಆನ್ಲೈನ್ ಬೆಟ್ಟಿಂಗ್’ ಗೆ ನಿಷೇಧ : ಹೊಸ ಮಸೂದೆ ಸಿದ್ಧಪಡಿಸಿದ ಸರ್ಕಾರ

    July 7, 2025
    Share

    ಬೆಂಗಳೂರು : ಆನ್ಲೈನ್ ಬೆಟ್ಟಿಂಗ್ಗೆ ಬ್ರೇಕ್ ಹಾಕಲು ಇದೀಗ ರಾಜ್ಯ ಸರ್ಕಾರ ಹೊಸ ಕಾನೂನು ಸಿದ್ದಪಡಿಸಿಕೊಂಡಿದೆ. ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಈ ಒಂದು ಮಸೂದೆಯನ್ನು ಮಂಡನೆ ಮಾಡಲಿದೆ. ಕರ್ನಾಟಕ ಪೊಲೀಸ್ ತಿದ್ದುಪಡಿ-1965 ವಿಧೇಯಕ ಅಂಗಿಕಾರಕ್ಕೆ ಸರ್ಕಾರ ನಿರ್ಧರಿಸಿದ್ದು, ಹೊಸ ಕಾಯ್ದೆಯ ಆನ್ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್ ಪ್ರಾಧಿಕಾರ ರಚನೆ ಮಾಡಲಿದೆ.

    ಅಲ್ಲದೇ ಅದೃಷ್ಟದ ಆಟ (ಲಕ್ ಗೇಮ್) ಗಳಿಗೂ ಕೂಡ ಬ್ರೇಕ್ ಬೀಳಲಿದೆ. ಪ್ರಾಧಿಕಾರದಿಂದ ದೃಢೀಕರಿಸಿದ ಕೇವಲ ಕೌಶಲ್ಯ ಆಟಗಳಿಗೆ ಮಾತ್ರ ಅನುಮತಿ ನೀಡಲಾಗಿರುತ್ತದೆ. ಆನ್ಲೈನ್ ಬೆಟ್ಟಿಂಗ್ ನಲ್ಲಿ ಭಾಗಿಯಾದವರಿಗೆ 3 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ದಂಡ ಬೀಳುತ್ತದೆ. ಅಲ್ಲದೇ ಬೆಟ್ಟಿಂಗ್ ಪ್ರೋತ್ಸಾಹಿಸುವವರಿಗೆ ಆರು ತಿಂಗಳ ಶಿಕ್ಷೆ ಹಾಗೂ 10,000 ದಂಡ ಬೀಳಲಿದೆ ಎಂದು ಹೇಳಲಾಗಿದೆ.

    ಹೌದು ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ (ತಿದ್ದುಪಡಿ) ಮಸೂದೆ 2025 ಕರಡು ಸಿದ್ಧಪಡಿಸಿರುವ ರಾಜ್ಯ ಸರ್ಕಾರ ಮುಂಬರುವ ಅಧಿವೇಶನದಲ್ಲಿ ‌ಮಂಡಿಸಲು ಮುಂದಾಗಿದೆ.ರಾಜ್ಯ ಸರ್ಕಾರ ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ ಹಾವಳಿಗೆ ಕಡಿವಾಣ ಹಾಕಲು ಇದೀಗ ಕರ್ನಾಟಕ ಪೊಲೀಸ್ (ತಿದ್ದುಪಡಿ) ಬಿಲ್ 2025 ಕರಡು ರೂಪಿಸಿದೆ.

    ಈ ಪ್ರಾಧಿಕಾರಕ್ಕೆ ಕಾನೂನು, ಸಾರ್ವಜನಿಕ ಆಡಳಿತ, ತಂತ್ರಜ್ಞಾನದ ಅನುಭವ ಹೊಂದಿರುವವರನ್ನು ರಾಜ್ಯ ಸರ್ಕಾರ ಅಧ್ಯಕ್ಷರಾಗಿ ನೇಮಿಸಲಿದೆ. ಜೊತೆಗೆ ಮೂವರು ಸದಸ್ಯರನ್ನು ನೇಮಕ ಮಾಡಲಿದೆ. ಓರ್ವ ಸದಸ್ಯ ಮಾಹಿತಿ ತಂತ್ರಜ್ಞಾನ, ಇನ್ನೊಬ್ಬ ಸದಸ್ಯ ಹಣಕಾಸು ಮತ್ತು ಮತ್ತೊಬ್ಬ ಸದಸ್ಯ ಸಮಾಜ ಕಲ್ಯಾಣದಲ್ಲಿ ಅನುಭವ ಹೊಂದಿರುವವರಾಗಿರಲಿದ್ದಾರೆ ಎಂದು ತಿಳಿದುಬಂದಿದೆ.

    ಈ ಹೊಸ ಪ್ರಸ್ತಾಪಿತ ಮಸೂದೆ ಪ್ರಕಾರ ರಾಜ್ಯ ಸರ್ಕಾರ ಕರ್ನಾಟಕ ಆನ್​ಲೈನ್ ಗೇಮಿಂಗ್ ಮತ್ತು ಬೆಟ್ಟಿಂಗ್ ನಿಯಂತ್ರಣ ಪ್ರಾಧಿಕಾರವನ್ನು ರಚನೆ ಮಾಡಲಿದೆ.‌ ಈ ಪ್ರಾಧಿಕಾರ ಹೊಸ ಕಾನೂನಿನಂತೆ ನಿಯಮಗಳ ಜಾರಿ, ಅನುಪಾಲನೆ, ಆನ್​ಲೈನ್ ಗೇಮಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ನಿಯಂತ್ರಣ, ನಿಗಾ ಇಡಲಿದೆ.

    ಮೂರು ವರ್ಷ ಜೈಲು, 5 ಲಕ್ಷ ದಂಡದ ಶಿಕ್ಷೆ!

    ಈ ಹೊಸ ಮಸೂದೆ ಪ್ರಕಾರ ಕಾನೂನು ಉಲ್ಲಂಘಿಸುವವರ ಮೇಲೆ ಕಠಿಣ ಶಿಕ್ಷೆ ವಿಧಿಸುವ ನಿಯಮ ರೂಪಿಸಲಾಗಿದೆ. ನೊಂದಾಯಿತವಲ್ಲದ ವೇದಿಕೆಗಳ ಮೂಲಕ ಗೇಮ್ಸ್ ಆಫ್ ಚಾನ್ಸ್ ಆಧಾರಿತ ಆನ್​ಲೈನ್ ಬೆಟ್ಟಿಂಗ್ ನಡೆಸುವ ವ್ಯಕ್ತಿ, ಸಂಸ್ಥೆ 3 ವರ್ಷ ವರೆಗಿನ ಸೆರೆಮನೆವಾಸ ಹಾಗೂ 1 ಲಕ್ಷವರೆಗೆ ದಂಡ ವಿಧಿಸುವ ಅವಕಾಶ ಇದೆ. ನಿರಂತರ ನಿಯಮ ಉಲ್ಲಂಘಿಸುವ ವ್ಯಕ್ತಿ, ಸಂಸ್ಥೆ ಮೇಲೆ 5 ಲಕ್ಷ ರೂ. ವರೆಗೆ ದಂಡ ವಿಧಿಸಬಹುದಾಗಿದೆ.

    Post Views: 241

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.