ಮಂಗಳೂರು: ಹೆಚ್ಚಿನ ಲಾಭದ ಆಮಿಷವೊಡ್ಡಿ ಹೂಡಿಕೆ ಹೆಸರಿನಲ್ಲಿ 40,000 ರೂ. ವರ್ಗಾಯಿಸಿಕೊಂಡು ವಂಚಿಸಿದ ಬಗ್ಗೆ ಮಂಗಳೂರು ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾನು ಫೇಸ್‌ಬುಕ್‌ನಲ್ಲಿ ಜಾಹೀರಾತು ನೋಡಿ ಗ್ರೂಪ್‌ವೊಂದಕ್ಕೆ ಸೇರ್ಪಡೆ ಗೊಂಡಿದ್ದೆ. ಅದರಲ್ಲಿ ಬರುವ ಷೇರು ಮಾರುಕಟ್ಟೆ ಹೂಡಿಕೆ ಕುರಿತ ಮಾಹಿತಿಗಳನ್ನು ನೋಡುತ್ತಿದ್ದೆ. ಆ ಗ್ರೂಪ್‌ನ ಅಡ್ಮಿನ್ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ದೊರೆಯುತ್ತದೆ ಎಂದು ತಿಳಿಸಿದ್ದನ್ನು ನಂಬಿದ ತಾನು ಎ.24ರಿಂದ ಮೇ 15ರವರೆಗೆ ತನ್ನ ಬ್ಯಾಂಕ್ ಖಾತೆಯಿಂದ 30.40 ಲಕ್ಷ ರೂ. ಗಳನ್ನು ಆರೋಪಿಗಳ ವಿವಿಧ ಬ್ಯಾಂಕ್ ಗೆ ವರ್ಗಾಯಿಸಿ ಮೋಸ ಹೋಗಿದ್ದೇನೆ ಎಂದು ಲಕ್ಷ್ಮೀನಾರಾಯಣ ಸೆನ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.