ಮಂಗಳೂರು: ನಗರದ ನಿವಾಸಿಯೊಬ್ಬರು ಷೇರು ಖರೀದಿಸಿ ಲಾಭ ಗಳಿಸುವ ಯತ್ನದಲ್ಲಿ ಬರೋಬ್ಬರಿ 1.50 ಕೋಟಿ ರೂ. ಕಳೆದುಕೊಂಡ ಬಗ್ಗೆ ನಗರದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಣಕಳೆದುಕೊಂಡ ವ್ಯಕ್ತಿ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್ ನೋಡುವಾಗ ‘Jefferies wealth multiplication Plan’ ಎಂಬ ಪೋಸ್ಟ್ ನೋಡಿ ಅದರಲ್ಲಿದ್ದ ಪ್ರಶ್ನೆಗಳಿಗೆ ಉತ್ತರಿಸಿದ್ದರು. ಷೇರ್‌ಗಳನ್ನು ಖರೀದಿಸಿ ಲಾಭಗಳಿಸುವ ಇರಾದೆಯಿಂದ ಅಪರಿಚಿತ ವ್ಯಕ್ತಿಯು ನೀಡಿದ ಮಾಹಿತಿಯಂತೆ ಮೇ 28ರಿಂದ 2024 ಜೂ.28ರ ತನಕ ಹಂತ ಹಂತವಾಗಿ ತನ್ನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಲ್ಲಿಕಟ್ಟೆ ಶಾಖೆಯಿಂದ 73,00,000 ರೂ. ಮತ್ತು ಗುರುಪುರ ವ್ಯವಸಾಯ ಸಹಕಾರಿ ಸಂಘ ನಿಯಮಿತ ವಾಮಂಜೂರು ಶಾಖೆ ಖಾತೆಯಿಂದ 77,00,000 ರೂ. ಒಟ್ಟು 1.50 ಕೋಟಿ ರೂ. ಗಳನ್ನು ಅಪರಿಚಿತ ವ್ಯಕ್ತಿಯ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ ವಂಚನೆಗೊಳಗಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಸೆನ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.