ಮಂಗಳೂರು: ಬಜ್ಪೆ ವಲಯದ ಮೂಡುಪೆರಾರ ಗ್ರಾಮದ ಅರ್ಕೆ ಪದವು ನಿವಾಸಿ ನಿತಿನ್ ಬೆಲ್ಚಡ ಕಾಣೆಯಾಗಿದ್ದಾರೆ.

ನಾಪತ್ತೆಯಾದವರ ಈ ಕುರಿತು ಘಟನೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾಗಿರುವ ಯುವಕ ವಿದ್ಯಾರ್ಥಿ ಮಂಗಳ ಕಾಲೇಜು ಪ್ಯಾರಾಮೆಡಿಕಲ್ ಸೈನ್ಸ್ ನಲ್ಲಿ ವ್ಯಾಸಂಗ ಮಾಡುತ್ತಿದ್ದು, ಫೆಬ್ರವರಿ 13ರಂದು ಕಾಲೇಜ್‍ನಿಂದ ಮನೆಗೆ ಬಂದು ಯಾರಿಗೂ ಹೇಳದೆ ಹೊರಗೆ ಹೋದವ ಮನೆಗೆ ಬಾರದೆ ನಾಪತ್ತೆಯಾಗಿದ್ದಾನೆ.
ನಿತಿನ್ ಬೆಲ್ಚಡ 5 ಅಡಿ 5 ಇಂಚು ಉದ್ದ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಕಾಣೆಯಾದ ದಿನ ಕೆಂಪು ಬಣ್ಣದ ಟೀ ಶರ್ಟ್, ಬಿಳಿ ಬಣ್ಣದ ಪ್ಯಾಂಟ್ ಧರಿಸಿದ್ದ ನಿತಿನ್‌ಗೆ ಕನ್ನಡ, ತುಳು, ಇಂಗ್ಲಿಷ್ ಭಾಷೆ ಬಲ್ಲನು. ಈತ ಕಂಡು ಬಂದಲ್ಲಿ ಬಜ್ಪೆ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸ್ ಠಾಣಾಧಿಕಾರಿಗಳು ಕೋರಿದ್ದಾರೆ.