ವಿಟ್ಲ: ಪಿಕಪ್ ಕದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೇರಳ ಮೂಲದ ರಂಷನ್ ಯಾನೆ ಸಾನು, ಜುನ್ಸಿಫ್, ನೌಫಲ್, ಹಂಸಕ್, ತಬ್ರಿಜ, ಮೊಹಮ್ಮದ್ ಉಸೈನ್, ಹ್ಯಾರಿಸ್, ಮೊಹಮ್ಮದ್ ಅಯೂಬ ಖಾನ್ ಬಂಧಿತರು. ಆರೋಪಿಗಳು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕುಡ್ತಮುಗೇರು ಎಂಬಲ್ಲಿ ನಿಲ್ಲಿಸಲಾಗಿದ್ದ ಪಿಕಪ್ ಕಳ್ಳತನ ಮಾಡಿದ್ದರು. ಈ ಕುರಿತಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.