ಮಂಗಳೂರು: ಬಿಜೈನ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಅನುಮಾನಾಸ್ಪದವಾಗಿ ನಿಂತಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿಯನ್ನು ಮೂಲತಃ ಕೋಲಾರ ಜಿಲ್ಲೆ ಕೆಜಿಎಫ್ ಬಂಗಾರ ಪೇಟೆ ಕೆಎಸ್‌ಆರ್‌ಟಿಸಿ ಡಿಪೋ ಹತ್ತಿರದ ನಿವಾಸಿ ಹರ್ಷಿತ್ (26) ಎಂದು ಗುರುತಿಸಲಾಗಿದೆ.
ಬರ್ಕೆ ಠಾಣೆಯ ಪೊಲೀಸರು ಎ. 3ರಂದು ರೌಂಡ್ಸ್‌ನಲ್ಲಿದ್ದಾಗ ಬೆಳಗ್ಗೆ 4.30ರ ವೇಳೆಗೆ ಬಿಜೈನ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಕತ್ತಲೆಯಲ್ಲಿ ನಿಂತಿದ್ದ ಯುವಕನೊಬ್ಬ ಓಡಿ ಹೋಗಲು ಯತ್ನಿಸಿದ್ದ.
ಪೊಲೀಸ್ ವಾಹನದಲ್ಲಿದ್ದ ಸಿಬಂದಿ ಆತನನ್ನು ಹಿಡಿದು ವಿಚಾರಣೆಗೆ ಒಳಪಡಿಸಿದಾಗ ಉತ್ತರ ಹೇಳಲು ತಡವರಿಸಿದ್ದಾನೆ. ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಹೆಸರನ್ನಷ್ಟೇ ಹೇಳಿದ್ದಾನೆ. ಆತ ಯಾವುದೋ ಕುಕೃತ್ಯ ನಡೆಸುವ ಉದ್ದೇಶದಿಂದ ನಿಂತುಕೊಂಡಿದ್ದ ಎಂದು ಪೊಲೀಸರು ಅನುಮಾನಿಸಿದ್ದು, ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.