Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಸ್ವಂತ ಕಾರಿಗೆ ಪೊಲೀಸ್ ನಾಮಫಲಕ: ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಂಡ ‘PSI’, ಭಾರೀ ಮೆಚ್ಚುಗೆ
    ಇತ್ತೀಚಿನ ಸುದ್ದಿ

    ಸ್ವಂತ ಕಾರಿಗೆ ಪೊಲೀಸ್ ನಾಮಫಲಕ: ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಂಡ ‘PSI’, ಭಾರೀ ಮೆಚ್ಚುಗೆ

    December 26, 2025
    Share

    ಸರ್ಕಾರಿ ಕಾರಿಗೆ ಇಲಾಖೆಯ ಹೆಸರು ಹಾಕಿಕೊಳ್ಳುವುದು ಮಾಮೂಲಿ. ಪೊಲೀಸ್ ಆದರೇ ಪೊಲೀಸ್, ಕಂದಾಯ ಇಲಾಖೆ ಆದರೇ ಕಂದಾಯ, ಅಬಕಾರಿ ಇಲಾಖೆ ಆದರೇ ಅಬಕಾರಿ ಅಂತ ಹೀಗೆ. ಆದರೇ ಇಲ್ಲೊಬ್ಬ ಪೊಲೀಸ್ ಅಧಿಕಾರಿ ತನ್ನ ಸ್ವಂತ ಕಾರಿಗೆ ಪೊಲೀಸ್ ಅಂತ ನಾಮಫಲಕ ಹಾಕಿಕೊಂಡು ಫ್ಯಾಮಿಲಿ ಸಹಿತ ಟ್ರಿಪ್ ಗೆ ತೆರಳಿದ್ದಾಗ ಪೊಲೀಸರಿಗೆ ಸಿಕ್ಕಿ ಬಿದ್ದಿರುವಂತ ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ. ಇಂತಹ ಅಧಿಕಾರಿಗೆ ಕಾನೂನು ಬಿಸಿ ಮುಟ್ಟಿಸಿದಂತ ಪಿಎಸ್ಐ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

    ಚಿಕ್ಕಮಗಳೂರಿನ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರದಲ್ಲಿ ಹೊಸ ವರ್ಷದ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರ ವಾಹನಗಳನ್ನು ಬಣಕಲ್ ಠಾಣೆಯ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರೇಣುಕಾ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಖಾಸಗಿ ವಾಹನವಾಗಿದ್ದರೂ ಪೊಲೀಸ್ ಎನ್ನುವಂತ ನಾಮಫಲಕವೊಂದನ್ನು ಹಾಕಿದ್ದು ಕಂಡು ಬಂದಿದೆ.

    ಸ್ವಂತ ವಾಹನಕ್ಕೆ ಪೊಲೀಸ್ ಎಂಬುದಾಗಿ ನಾಮಫಲಕ ಹೊಂದಿದ್ದನ್ನು ಪರಿಶೀಲಿಸಿದಾಗ, ಅವರು ಧಾರವಾಡದಿಂದ ಧರ್ಮಸ್ಥಳಕ್ಕೆ ಕುಟುಂಬ ಸಮೇತ ಫ್ಯಾಮಿಲಿ ಟ್ರಿಪ್ ಬಂದಿರೋದು ತಿಳಿದು ಬಂದಿದೆ. ಕರ್ತವ್ಯದಲ್ಲಿ ಇಲ್ಲದೇ ಪೊಲೀಸ್ ಎಂಬುದಾಗಿ ನಾಮಫಲಕವನ್ನು ಅನಧಿಕೃತವಾಗಿ ಹಾಕಿಕೊಂಡಿದ್ದನ್ನು ಪಿಎಸ್ಐ ರೇಣುಕಾ ಪ್ರಶ್ನಿಸಿದ್ದಾರೆ.

    ನಿಯಮಾನುಸಾರ ಕರ್ತವ್ಯದಲ್ಲಿ ಇಲ್ಲದಂತ ಸಂದರ್ಭದಲ್ಲಿ ಅಥವಾ ಅಧಿಕೃತ ಅನುಮತಿ ಇಲ್ಲದೇ ಪೊಲೀಸ್ ನಾಮಫಲಕ ಅಳವಡಿಸಿಕೊಂಡಿರೋದು ಕಾನೂನು ಬಾಹಿರವಾಗಿದೆ. ಇದು ಕಾನೂನು ಉಲ್ಲಂಘನೆಯಾಗಿದೆ ಎಂಬುದಾಗಿ ಹೇಳುವ ಮೂಲಕ ಬಣಕಲ್ ಠಾಣೆಯ ಪಿಎಸ್ಐ ರೇಣುಕಾ ಅನಧಿಕೃತವಾಗಿ ಪೊಲೀಸ್ ಎಂಬುದಾಗಿ ತಮ್ಮ ಖಾಸಗಿ ಕಾರಿಗೆ ಅಳವಡಿಸಿದ್ದಂತ ನಾಮಫಲಕವನ್ನು ತೆರವುಗೊಳಿಸಿದ್ದಾರೆ. ಅಲ್ಲದೇ ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಪೊಲೀಸ್ ಅಧಿಕಾರಿಯ ವಿರುದ್ಧವೇ ಕೇಸ್ ದಾಖಲಿಸಿ, ದಂಡ ವಿಧಿಸಿದ್ದಾರೆ.

    ಒಬ್ಬ ಪೊಲೀಸ್ ಅಧಿಕಾರಿಯಾಗಿ, ಮತ್ತೊಬ್ಬ ಪೊಲೀಸ್ ಅಧಿಕಾರಿ ಎಂಬುದನ್ನು ಲೆಕ್ಕಿಸದೇ ಕಾನೂನು ಬಾಹಿರವಾಗಿ, ಅನಧಿಕೃತವಾಗಿ ಪೊಲೀಸ್ ಎಂಬುದಾಗಿ ತಮ್ಮ ಸ್ವಂತ ಕಾರಿಗೆ ನಾಮಫಲಕ ಅಳವಡಿಸಿದ್ದ ಸರ್ಕಾರಿ ಅಧಿಕಾರಿಗೆ ಕಾನೂನಿನ ಅಸ್ತ್ರದ ಮೂಲಕ ಬಣಕಲ್ ಠಾಣೆಯ ಪಿಎಸ್ಐ ರೇಣುಕಾ ಬಿಸಿ ಮುಟ್ಟಿಸಿದ್ದಾರೆ. ಅವರ ಈ ಕ್ರಮದ ಬಗ್ಗೆ ಸಾರ್ವಜನಿಕರು ಭಾರೀ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

    Post Views: 129

    Related Posts

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026

    ಮಂಗಳೂರು: ನಿವೃತ್ತ ಬ್ಯಾಂಕ್ ಮಹಿಳಾ ಉದ್ಯೋಗಿಗೆ ಸೈಬರ್ ವಂಚನೆ

    March 6, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.