ಹುಬ್ಬಳ್ಳಿಯಲ್ಲಿ 5 ವರ್ಷದ ಬಾಲಕಿಗೆ ಚಾಕ್ಲೆಟ್ ಆಸೆ ತೋರಿಸಿ ಅತ್ಯಾಚಾರಕ್ಕೆ ಯತ್ನಿಸಿ ಬಳಿಕ ಕುತ್ತಿಗೆ ಹಿಚುಕಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಇದೀಗ ಪೊಲೀಸರು ಗುಂಡೇಟಿಗೆ ಬಲಿಯಾದಂತಹ ಆರೋಪಿ ಫೋಟೋವನ್ನು ರಿಲೀಸ್ ಮಾಡಿದ್ದಾರೆ.

ಹೌದು ಎನ್‌ಕೌಂಟರ್‌ಗೆ ಬಲಿಯಾದ ರಿತೇಶ್ ಕುಮಾರ್ (35) ಭಾವಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಶವಗಾರದಲ್ಲಿ ಹಂತಕನ ಶವ ಅನಾಥವಾಗಿ ಬಿದ್ದಿದೆ. ಕುಟುಂಬಸ್ಥರ ಪತ್ತೆಗೆ ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆಯು ಭಾವಚಿತ್ರ ಸಹಿತ ಪ್ರಕಟಣೆ ಹೊರಡಿಸಿದೆ.
ಈತ ಗೋದಿ ಮೈಬಣ್ಣ, ತೆಳ್ಳನೆಯ ಮೈಕಟ್ಟು, ಕೋಲು ಮುಖ, 5.3 ಎತ್ತರ, ಅಗಲ ಹಣೆ ಹೊಂದಿದ್ದಾನೆ. ಅಲ್ಲದೇ, ಈತನ ಬಲಗೈಯಲ್ಲಿ ಹಿಂದಿ ಅಕ್ಷರದಲ್ಲಿ ‘ಓಂ ನಮಃ ಶಿವಾಯ ಜಯ ಸಂಜಯ’ ಎಂಬ ಟ್ಯಾಟು ಗುರುತು ಸಹ ಇದೆ. ಈತನ ಗುರುತು ಪರಿಚಯ ಇದ್ದವರು ಕೂಡಲೇ 0836-2233490 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಲಾಗಿದೆ.
ಘಟನೆ ಹಿನ್ನೆಲೆ?
ಕೆಲ ದಿನಗಳ ಹಿಂದಷ್ಟೆ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ನಡೆದಿತ್ತು. ಪ್ರಕರಣ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಆರೋಪಿಯನ್ನು ಬಂಧಿಸುವ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದರು. ಪೊಲೀಸರ ಗುಂಡೇಟಿಗೆ ಹಂತಕ ರಿತೇಶ್ ಕುಮಾರ್ ಬಲಿಯಾಗಿದ್ದ.