ತೆಲುಗು ಚಿತ್ರರಂಗದ ಖ್ಯಾತ ನಟ ಪೋಸಾನಿ ಕೃಷ್ಣಮುರಳಿಯವರನ್ನು ಬುಧವಾರ ತೆಲಂಗಾಣ ಪೊಲೀಸರು
ಬಂಧಿಸಿದ್ದರು.

ಕೃಷ್ಣಮುರಳಿ ಅವರು ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಡಿಸಿಎಂ ಪವನ್ ಕಲ್ಯಾಣ್
ವಿರುದ್ಧ ಅವಾಚ್ಯ ಶಬ್ದಗಳ ಬಳಸಿ ನಿಂದಿಸಿದ ಹಾಗೂ ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಂಧನ ಮಾಡಲಾಗಿದೆ. ಇವರ ಈ ಬಂಧನ ಬಗ್ಗೆ ಪವನ್ ಕಲ್ಯಾಣ್ ಅವರ ಕೈವಾಡ ಇದೆಯೇ ಎಂಬ ಅನುಮಾನ ಮೂಡಿದೆ. ಹೌದು, ಚುನಾವಣಾ ಸಮಯದಲ್ಲಿ ನನ್ನ ಕುಟುಂಬದ ಬಗ್ಗೆ ಗೆಳೆಯರ ಬಗ್ಗೆ ಮಾತನಾಡುತ್ತಿದ್ದೀರೋ ನನಗೆ ಗೊತ್ತಿದೆ, ಅವರಿಗೆ ತಕ್ಕ ಶಾಸ್ತಿ ಕಾದಿದೆ ಎಂದು ಪವನ್ ಕಲ್ಯಾಣ್ ಎಚ್ಚರಿಕೆ ನೀಡಿದ್ದರು.