Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಬೆಳ್ತಂಗಡಿ: ಕಾರು ಮೇಲೆ ಕುಸಿದು ಬಿದ್ದ ವಿದ್ಯುತ್ ಟವರ್ – ಸಂಪೂರ್ಣ ವಿದ್ಯುತ್ ಸ್ಥಗಿತ
    ಇತ್ತೀಚಿನ ಸುದ್ದಿ

    ಬೆಳ್ತಂಗಡಿ: ಕಾರು ಮೇಲೆ ಕುಸಿದು ಬಿದ್ದ ವಿದ್ಯುತ್ ಟವರ್ – ಸಂಪೂರ್ಣ ವಿದ್ಯುತ್ ಸ್ಥಗಿತ

    November 6, 2023
    Share

    ಬೆಳ್ತಂಗಡಿ: ಉಜಿರೆ- ಬೆಳಾಲು ರಸ್ತೆಯ ಕಿರಿಯಾಡಿ ಕ್ರಾಸ್ ಬಳಿ ಬೆಳ್ತಂಗಡಿ – ಧರ್ಮಸ್ಥಳ 33 ಕೆ.ವಿ ವಿದ್ಯುತ್ ಸಂಪರ್ಕದ ಮುಖ್ಯ ಲೈನ್ ನ ಟವರ್ ಕುಸಿದು ಬಿದ್ದು ಒಂದು ಕಾರು ಹಾಗೂ ದ್ವಿಚಕ್ರ ವಾಹನಕ್ಕೆ ಹಾನಿಯಾದ ಘಟನೆ ಭಾನುವಾರ ರಾತ್ರಿ ನಡೆದಿದೆ.

    ಭಾನುವಾರ ಸಂಜೆ ಜಡಿಮಳೆಗೆ ಕಿರಿಯಾಡಿ ಬಳಿ ಬೆಳ್ತಂಗಡಿ-ಧರ್ಮಸ್ಥಳ 33 ಕೆ.ವಿ ವಿದ್ಯುತ್ ಸಂಪರ್ಕದ ಮುಖ್ಯ ಲೈನ್ ವಿದ್ಯುತ್ ಟವರ್ ನೆಲದತ್ತ ಭಾಗುತ್ತಿರುವುದನ್ನು ಗಮನಿಸಿದ ಮೆಸ್ಕಾಂ ಪವರ್ ಮ್ಯಾನ್ ಕೂಡಲೇ ಉಜಿರೆ ಉಪವಿಭಾಗಕ್ಕೆ ಮಾಹಿತಿ ನೀಡಿದರು.

    ಕೂಡಲೇ ಮೆಸ್ಕಾಂ ಅಧಿಕಾರಿಗಳು ದೊಂಡೋಲೆಯ ಪವರ್ ಪ್ರಾಜೆಕ್ಟ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಸ್ಥಳಕ್ಕೆ ತೆರಳಿದ್ದರು. ಪವರ್ ಪ್ರೊಜೆಕ್ಟ್ ನ ಅಧಿಕಾರಿಗಳು ಒಂದು ಕಾರು ಮತ್ತು ಬೈಕ್ ನಲ್ಲಿ ಬಂದು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರು.

    ವಾಲಿಕೊಂಡು ಬರುತ್ತಿದ್ದ ಟವರ್ ಕಾರು ಹಾಗೂ ಬೈಕ್ ನ ಮೇಲೆಯೇ ಬಿದ್ದಿತ್ತೇನ್ನಲಾಗಿದೆ. ಕಾರಿನಲ್ಲಿ ಪವರ್ ಪ್ರಾಜೆಕ್ಟ್ ನ ಗಣೇಶ್ ಎಂಬವರಿದ್ದು, ಸಣ್ಣ ಪುಟ್ಟ ಗಾಯಕ್ಕೊಳಗಾಗಿ ಅಪಾಯದಿಂದ ಪಾರಾಗಿದ್ದಾರೆ.

    ಮೆಸ್ಕಾಂನ ತುರ್ತು ಸ್ಪಂದನೆ ಕಾರಣ ಹೆಚ್ಚಿನ ಅಪಾಯ ಉಂಟಾಗುವುದು ತಪ್ಪಿದೆ. ಟವರ್ ಕುಸಿತದ ಕಾರಣ ಧರ್ಮಸ್ಥಳ ಭಾಗದ ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ.

    Post Views: 167

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.