Facebook Twitter Instagram
    Sunday, June 8
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಪ್ರವೀಣ್ ಹತ್ಯೆ: ಪ್ರಮುಖ ಮೂವರು ಆರೋಪಿಗಳ ಬಂಧನದ ರೋಚಕ ಮಾಹಿತಿ ಬಿಚ್ಚಿಟ್ಟ ಅಲೋಕ್​ ಕುಮಾರ್​
    ಇತ್ತೀಚಿನ ಸುದ್ದಿ

    ಪ್ರವೀಣ್ ಹತ್ಯೆ: ಪ್ರಮುಖ ಮೂವರು ಆರೋಪಿಗಳ ಬಂಧನದ ರೋಚಕ ಮಾಹಿತಿ ಬಿಚ್ಚಿಟ್ಟ ಅಲೋಕ್​ ಕುಮಾರ್​

    August 11, 2022
    Share

    ಮಂಗಳೂರು: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದು, ಈವರೆಗೆ ಬಂಧಿತರ ಸಂಖ್ಯೆ 10ಕ್ಕೇರಿದೆ.

    ಶಿಯಾಬುದ್ದೀನ್​ ಅಲಿ(33), ಎಲಿಮಲೆಯ ಬಶೀರ್(29) ಮತ್ತು ರಿಯಾಜ್(27) ಬಂಧಿತ ಆರೋಪಿಗಳು.

    15 ದಿನಗಳಿಂದ ಪದೇಪದೆ ಜಾಗ ಬದಲಿಸುತ್ತಾ ತಲೆಮರೆಸಿಕೊಂಡಿದ್ದ ಆರೋಪಿಗಳನ್ನ ತಲಪಾಡಿ ಚೆಕ್ ಪೋಸ್ಟ್​ನಲ್ಲಿ ಗುರುವಾರ ಬೆಳಗ್ಗೆ ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಿದ್ದ ವಾಹನ ಹಾಗೂ ಆಯುಧಗಳನ್ನು ವಶಕ್ಕೆ ಪಡೆಯಲಾಗುವುದು ಎಂದು ಎಡಿಜಿಪಿ ಅಲೋಕ್ ಕುಮಾರ್ ವಿವರಿಸಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಲೋಕ್​ ಕುಮಾರ್​, ಪ್ರಕರಣಗಳಲ್ಲಿ ಸಂಚು ರೂಪಿಸಿದ ಹಾಗೂ ಸಹಕಾರ ನೀಡಿದ ಒಟ್ಟು 7 ಮಂದಿಯನ್ನು ಈಗಾಗಲೇ ಬಂಧಿಸಲಾಗಿದೆ. ಪ್ರಮುಖ ಆರೋಪಿಗಳ ಬಂಧನ ಸೇರಿದಂತೆ ಒಟ್ಟು ಹತ್ತು ಮಂದಿಯ ಬಂಧನವಾಗಿದೆ. ಇನ್ನೂ ತನಿಖೆ ಮುಂದುವರಿದಿದ್ದು ಹತ್ಯೆಗೆ ಹಾಗೂ ಆರೋಪಿಗಳ ರಕ್ಷಣೆಗೆ ಸಹಕಾರ ನೀಡಿದವರ ಬಂಧನವಾಗಲಿದೆ ಎಂದಿದ್ದಾರೆ.

    ಪ್ರವೀಣ್​ ಕೊಲೆ ಪ್ರಕರಣದ ಪ್ರಮುಖ ಮೂವರು ಆರೋಪಿಗಳು ಪದೇಪದೆ ತಮ್ಮ ವಾಸ ಸ್ಥಾನ ಬದಲಿಸುತ್ತಿದ್ದರು. ವಿಶೇಷ ತಂಡ ರಚಿಸಿ ಅವರನ್ನು ಬಂಧಿಸಲಾಗಿದೆ. ಆರೋಪಿಗಳನ್ನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಕೃತ್ಯಕ್ಕೆ ಬಳಸಿದ ವಸ್ತುಗಳನ್ನ ವಶಕ್ಕೆ ಪಡೆದ ಬಳಿಕ ತನಿಖೆಯನ್ನು ಎನ್​ಐಎಗೆ ಹಸ್ತಾಂತರಿಸಲಾಗುವುದು ಎಂದು ವಿವರಿಸಿದ್ದಾರೆ.

    Post Views: 137

    Related Posts

    ಉಡುಪಿ: ಕಾರು ಡಿಕ್ಕಿ ಅಪಘಾತದಲ್ಲಿ ಎಂ.ಬಿ.ಎ ವಿದ್ಯಾರ್ಥಿ ಬಲಿ

    June 7, 2025

    ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಲಂಚ ಸ್ವೀಕರಿಸುತ್ತಿದ್ದಾಗ ಸೆರೆ

    June 7, 2025

    ಪುತ್ತೂರು: ಗಡಿಪಾರು ನೋಟಿಸ್ ವಿಚಾರಣೆ – 8 ಮಂದಿ ವಕೀಲರ ಮೂಲಕ ಹಾಜರಾತಿ

    June 6, 2025
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2025 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.