ಮಂಗಳೂರು: ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ ಎಂಡಿ ಪೂರೈಸಿ, 10 ವರ್ಷಗಳಿಂದ ಬಹರೇನ್ನಲ್ಲಿ ವಾಸವಿರುವ ಸುನಿಲ್ ರಾವ್ ಅವರನ್ನು ಇಸ್ರೇಲ್ ಪರ ಪೋಸ್ಟ್ ಹಾಕಿದ ಆರೋಪದ ಮೇಲೆ ಬಹರೇನ್ ಪೊಲೀಸರು ಬಂಧಿಸಿದ್ದಾರೆ. ಡಾ. ಸುನಿಲ್ ರಾವ್ ಅವರು ಹಮಾಸ್ ಉಗ್ರರನ್ನು ವಿರೋಧಿಸಿ ಟ್ವೀಟರ್ ನಲ್ಲಿ ಹಾಕಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಕೆಲವರು ಈ ಪೋಸ್ಟ್ಗೆ ಆಕ್ಷೇಪ ವ್ಯಕ್ತಪಡಿಸಿ, ಬಹರೇನ್ ಆಡಳಿತವನ್ನು ಟ್ಯಾಗ್ ಮಾಡಿದ್ದರು. ಈ ವಿಚಾರವನ್ನು ಆಧರಿಸಿ, ಅಲ್ಲಿನ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಈ ಘಟನೆಯ ಬೆನ್ನಲ್ಲೇ ಅವರು ಕಾರ್ಯ ನಿರ್ವಹಿಸುತ್ತಿದ್ದ ಬಹರೇನ್ನ ರಾಯಲ್ ಆಸ್ಪತ್ರೆ, ಅವರನ್ನು ಕರ್ತವ್ಯದಿಂದ ಬಿಡುಗಡೆ ಗೊಳಿಸಿದೆ. ಈ ಸಂಬಂಧ ಆಸ್ಪತ್ರೆ ತನ್ನ ‘X’ ನಲ್ಲಿ ಪೋಸ್ಟ್ ಹಾಕಿಕೊಂಡಿದೆ.