ಉಡುಪಿ: ಪೈಪ್ಲೈನ್ ಕೆಲಸ ವಹಿಸಿಕೊಂಡಿದ್ದ ವ್ಯಕ್ತಿಗಳಿಬ್ಬರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕದ್ದುಕೊಂಡು ಹೋಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಫೆ.15ರ ರಾತ್ರಿ 8ರಿಂದ ಫೆ. 16ರ ಬೆಳಗ್ಗೆ 11 ಗಂಟೆಯ ನಡುವೆ ಅಜೀಜ್ ಅನ್ವರ್ ಹಾಗೂ ಸೇತಾಬುದ್ದಿನ್ ಅವರು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಿನಲ್ಲಿ ಗುತ್ತಿಗೆದಾರ ಗೊನಳ್ಳ ವೆಂಕಟೇಶ್ವರಲು ತಿಳಿಸಿದ್ದಾರೆ.