ಮಂಗಳೂರು: ಅಪ್ರಾಪ್ತೆಯ ಮೇಲೆ ನಿರಂತರ ಅತ್ಯಾಚಾರವೆಸಗಿ ಆಕೆ ಗರ್ಭಿಣಿಯಾಗಲು ಕಾರಣಕರ್ತನಾದ ಪಿಎಸ್ಐ ಓರ್ವರ ಮಗನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಕಾಮುಕ ದ.ಕ ಜಿಲ್ಲೆಯ ಪಿಎಸ್ಐ ಓರ್ವರ ಮಗನಾಗಿದ್ದು ಆತನಿಗೆ ಮದುವೆಯಾಗಿ ಮಕ್ಕಳಿದ್ದಾರೆ. ಸದ್ಯ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಹದಿನೇಳು ವರ್ಷದ ವಿದ್ಯಾರ್ಥಿನಿಯೋರ್ವಳು ಮನೆಯಲ್ಲಿ ಒಬ್ಬಳೇ ಇದ್ದಾಗ ನೀರು ಕೇಳುವ ನೆಪದಲ್ಲಿ ಹೋಗಿ ಅತ್ಯಾಚಾರ ಎಸಗಿದ್ದಾನೆ. ಬೆದರಿಕೆಯೊಡ್ಡಿ ಹಿಂಸಾತ್ಮಕವಾಗಿ ಏಳೆಂಟು ಬಾರಿ ಈತ ಆಕೆಯ ಮೇಲೆ ತನ್ನ ಕಾಮತೃಷೆ ತೀರಿಸಿದ್ದು ಆಕೆ ಗರ್ಭಿಣಿಯಾದ ಬಳಿಕ ಕಾಮುಕನ ಕೃತ್ಯ ಬಯಲಾಗಿದೆ.