ಮಂಗಳೂರು: ಲೋಕೋಪಯೋಗಿ ಹಾಗೂ ಅಬಕಾರಿ ಇಲಾಖೆಗಳ ಭ್ರಷ್ಟಾಚಾರದ ಬಗ್ಗೆ ವಿವರ ನೀಡಲು ದಿನಾಂಕ 3-11-2025 ಸೋಮವಾರದಂದು ಚಿತ್ರ ನಿರ್ಮಾಪಕರಾದ ಆರ್ ಧನರಾಜ್ ರವರು ಪತ್ರಿಕಾಗೋಷ್ಠಿ ನಡೆಸಿದರು
ಚಿತ್ರ ನಿರ್ಮಾಪಕರಾದ ಆರ್. ಧನರಾಜ್ ರವರ ಪತ್ರಿಕಾಗೋಷ್ಟಿಯಲ್ಲಿ 3 ಬೇಡಿಕೆಗಳನ್ನು ಹಾಕಲಾಯಿತು.
- ತುಳು ನಿರ್ಮಾಪಕರಿಗೆ ಮಾನ್ಯತೆ ಕೊಡಬೇಕು.
- ಅಬಕಾರಿ ಇಲಾಖೆಯ ಸಿ ಆರ್7 ಲೈಸನ್ಸ್ ನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ, ಅಬಕಾರಿ ಸುಂಕ ಜಾಸ್ತಿಯಾಗುತ್ತಿದೆ. ಆದುದರಿಂದ ಅಬಕಾರಿ ಸಚಿವರನ್ನು ಬದಲಾಯಿಸಬೇಕು.
- ಲೋಕೋಪಯೋಗಿ ಇಲಾಖೆಯಲ್ಲಿ 9 ವರ್ಷಗಳಿಂದ ಆಫಿಸರ್ ಆಗಿ ಕೆಲಸಮಾಡುತ್ತಿರುವ ಭ್ರಷ್ಟ ಅಧಿಕಾರಿಯನ್ನು, ಸಚಿವರಾದ ಸತೀಶ್ ಜಾರಕಿಯವರು ವರ್ಗಾವಣೆ ಮಾಡಬೇಕು.




