Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಅಜ್ಜಿಯನ್ನ ರೇಪ್ ಮಾಡಲು ಹೋಗಿದ್ದ ವಿಕೃತ ಕಾಮುಕ, ಮಾಡಿದ್ದು ಡಬಲ್ ಮರ್ಡರ್..!
    ಇತ್ತೀಚಿನ ಸುದ್ದಿ

    ಅಜ್ಜಿಯನ್ನ ರೇಪ್ ಮಾಡಲು ಹೋಗಿದ್ದ ವಿಕೃತ ಕಾಮುಕ, ಮಾಡಿದ್ದು ಡಬಲ್ ಮರ್ಡರ್..!

    November 26, 2024
    Share

    ಅಜ್ಜ ಅಜ್ಜಿ ಡಬರ್ ಮರ್ಡರ್ ಮಾಡಿ ಎಸ್ಕೇಪ್ ಆಗಿದ್ದ ಸೈಕೊ ಕ್ಯಾಬ್ ಡ್ರೈವರ್ ನನ್ನು ಘಟನೆ ನಡೆದ 48 ಗಂಟೆಗಳ ಒಳಗೆ ಚಿಕ್ಕಮಗಳೂರು ಜಿಲ್ಲೆಯ ಮಲ್ಲಂದೂರು ಪೊಲೀಸರು ಬಂಧಿಸಿದ್ದಾರೆ. ಅಜ್ಜಿ ರೇಪ್ ಮಾಡಲು ಹೋಗಿ ಅಜ್ಜ ಅಜ್ಜಿ ಇಬ್ಬರನ್ನೂ ಮುಗಿಸಿದ ನಿಶಾಂತ್ ಕೊಲೆಗೆ ಕಾರಣವಾದ ರೋಚಕತೆಯನ್ನು ಪೊಲೀಸರು ಕೊನೆಗೂ ಬಾಯಿ ಬಿಡಿಸಿದ್ದಾರೆ.

    ನವೆಂಬರ್ 22 ರಂದು ಬೆಳ್ಳಂಬೆಳಗ್ಗೆ ಡಬಲ್ ಮರ್ಡರ್ ಸುದ್ದಿಯನ್ನು ಕೇಳಿದ ತಕ್ಷಣ ಪೊಲೀಸರಿಗೆ ಶಾಕ್ ಆಗಿತ್ತು. ಏಕೆಂದರೆ ಕಾಫಿನಾಡು ಚಿಕ್ಕಮಗಳೂರು ತಾಲೂಕಿನ ಅಭಯಾರಣ್ಯದ ಅಂಚಿನ ಗ್ರಾಮದಿಂದ ಕೊಲೆ ಸುದ್ದಿ ಬಂದಿತ್ತು.ಮುತ್ತೋಡಿ ಅಭಯಾರಣ್ಯ ಕ್ಕೆ ಹೊಂದಿಕೊಂಡಿರೋ ಕೊಳಗಾಮೆ ಗ್ರಾಮದ ತೋಟದ ಲೈನ್ ನಲ್ಲಿ ಕೂಲಿ ಕಾರ್ಮಿಕರಾದ ಬಸಪ್ಪ, ಲಲತಾ ಎನ್ನುವ ವೃದ್ದ ದಂಪತಿಗಳು ಹೆಣವಾಗಿ ಬಿದ್ದಿದ್ದರು.ಈ ವೃದ್ದ ದಂಪತಿಗಳಿಗೆ ಮಕ್ಕಳು ಇಲ್ಲ ಮೂಲತಃ ತುಮಕೂರು ಜಿಲ್ಲೆಯ ಗುಬ್ಬಿಯವ್ರು 18 ವರ್ಷದಿಂದ ಇದೇ ತೋಟದಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.ತೋಟದ ಲೈನ್ ನಲ್ಲಿ ಇದ್ದರೂ ಯಾರ ಜೊತೆಯಲ್ಲಿ‌ ಕಿರಿಕ್ ಇಲ್ಲ ಅವ್ರಾಯ್ತು ಕೆಲಸ ಅಂತ ಬದುಕು ನಡೆಸುತ್ತಾ ಆರಾಮಯಾಗಿ ಇದ್ದರು. ಮಕ್ಕಳು ಎನ್ನುವ ನೋವು ಇದ್ದರೂ ಕೆಲಸ ಮಾಡುತ್ತಾ ಎಲ್ಲವನ್ನು ಮರೆತು ಜೀವನ ನಡೆಸುತ್ತಿದ್ದರು. ಆದರೆ ಈ ವೃದ್ದ ದಂಪತಿಗಳನ್ನು ಕೊಲೆ ಮಾಡಿರುವುದು ಯಾರು ಎನ್ನುವ ಪ್ರಶ್ನೆ ಪೊಲೀಸರನ್ನು ಕಾಡತೊಡಗಿತ್ತು.
    ಪೊಲೀಸರಿಗೆ ನಿಶಾಂತ್ ಹೆಸರು ಬಂದಾಗ ಅನುಮಾನ ಕಾಡಿದ್ದಂತೂ ನಿಜ..ಈತ ಎರಡು ದಿನ ಇಲ್ಲೆ ಇದ್ದ ಅನ್ನೋ ಮಾಹಿತಿಯೂ ಸಿಕ್ತು.ಅದಲ್ಲದೆ ವೃದ್ದ ದಂಪತಿಗಳಿಗೆ ಹತ್ತಿರದ ಸಂಬಂಧಿ ಎನ್ನುವ ಮಾಹಿತಿಯೂ ಪೊಲೀಸರಿಗೆ ಲಭ್ಯವಾಯಿತು.

    ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದ ಯಾವಾಗ್ಲೂ ಬರ್ತಿದ್ದ ಅಂತಾನೂ ಕೆಲವರು ಪೊಲೀಸರಿಗೆ ಹೇಳಿದ್ರು.ಆರಂಭದಲ್ಲಿ ಪೊಲೀಸರು ಹಣಕಾಸಿಗೆ ಕಿರಿಕ್ ಆಗಿ ಕೊಲೆ ಆಗಿದೆ ಎನ್ನುವ ಅನುಮಾನ ಬಂದಿತ್ತು.ದಂಪತಿಗಳ ಚಿನ್ನ ಅಡಿವಿಟ್ಟು ದುಡ್ಡು ಕೊಟ್ಟಿದ್ರು ಅದನ್ನ ಕೇಳೋಕೆ ಹೋದಾಗ್ಲೇ ಮರ್ಡರ್ ಅಗಿದೆ ಅಂತಾನೂ ಗುಸುಗುಸು ಸುದ್ದಿ ಹರಿಡ್ತು…ಕೊನೆಗೂ ಪೊಲೀಸರು ಅತನನ್ನ ಕರ್ಕೊಂಡು ಬಂದು ವಿಚಾರಣೆ ನಡೆಸಿದ್ದಾರೆ..ಅಗ ಈ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ‌..‌ಆ ಕೊಲೆ ನಡೆದಿದ್ದು ಹಣಕ್ಕಾಗಿ ಅಲ್ಲ‌..ಅತ್ಯಾಚಾರಕ್ಕೆ ಯತ್ನಿಸಿದಾಗ ವಿರೋಧ ಪಡಿಸಿದ ಇಬ್ಬರನ್ನು ಕೊಂದು ಪರಾರಿಯಾಗಿದ್ದ ಅನ್ನೋದು.
    ಮಾರಕ ಕಾಯಿಲೆಗೆ ತುತ್ತಾಗಿದ್ದ ಎಂದು ಸ್ನೇಹಿತರು ಹೇಳಿದ್ದರಿಂದ ಅದಕ್ಕೆ ಅಜ್ಜಿಯನ್ನು ರೇಪ್ ಮಾಡಲು ಮುಂದಾಗಿದ್ದ ಇವನ ಸೈಕೊ ಟ್ರೀಟ್ ಮೆಂಟ್ ಗೆ ಪೊಲೀಸರಿಗೆ ಬೆಚ್ಚಿ ಬಿದ್ದಿದ್ದಾರೆ. ರಾತ್ರೋರಾತ್ರಿ ಹತ್ಯೆ ಮಾಡಿ ಬೆಂಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದ ಪಾಪಿಯನ್ನು ಮಲ್ಲಂದೂರು ಪಿಎಸ್‌ಐ ಗುರು ಸಜ್ಜನ್ ನೇತೃತ್ವದ ತಂಡ ಬಂಧಿಸಿ ಕರೆ ತಂದಿದೆ.ಆರೋಪಿಯು ಬಸಪ್ಪ ಹಾಗೂ ಲಲಿತಮ್ಮ ರವರನ್ನು ಕೊಲೆ ಮಾಡಲು ಬಳಸಿದ ವಸ್ತುಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತಾರೆ.ಕೃತ್ಯ ನಡೆದ ಕೇವಲ 48 ಗಂಟೆ ಒಳಗಾಗಿ ಆರೋಪಿಯನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿರುತ್ತದೆ.ಒಟ್ಟಾರೆ ಎರಡು ದಿನ ಇದ್ದ ‌.ಸಂಬಂಧಿ ಬಂದಿದ್ದಾನೆ ಅಂತಾ ಚೆನ್ನಾಗಿ ತಿನ್ಸಿ ಮನೆಯಲ್ಲಿಯೇ ಮಲಗಿಸಿದ್ರೆ ಅದನ್ನ ಕಾಮಕ್ರೌರ್ಯಕ್ಕೆ ಊಟ ಬಡಿಸಿದವರ ಮೇಲೆಯ ಎರಗಿ ವಿರೋಧ ಮಾಡ್ತಿದ್ದಂತೆ ಹತ್ಯೆಗೈದು ಈಗ ಕಂಬಿಹಿಂದೆ ಸೇರಿದ್ದಾನೆ.

    Post Views: 313

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.