ಬಜಪೆ: ಇಲ್ಲಿನ ಪರಿಸರದಲ್ಲಿ ಕೆಂಗಣ್ಣು ಕಾಯಿಲೆ ಸಮಸ್ಯೆ ಮುಂದುವರಿದಿದ್ದು, ಹಲವು ಮನೆ ಗಳಿಗೆ ಹರಡಿದೆ. ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಂಡಿದೆ. ಇದರಿಂದ ಮಿದುಳು ಜ್ವರ ವಿರುದ್ಧ ಲಸಿಕೆಯ ಸರ್ವೇಗೆ ಮನೆ ಮನೆಗೆ ತೆರಳುವ ಆಶಾ ಕಾರ್ಯಕರ್ತೆಯರಿಗೂ ಸಮಸ್ಯೆ ಎದುರಾಗಿದೆ.
ಬಜಪೆ ಪ. ಪಂ.ನ ಪಡೀಲ್ ಪ್ರದೇಶದಲ್ಲಿದ್ದ ಕೆಂಗಣ್ಣು ಕಾಯಿಲೆ ಈಗ ಜರಿನಗರದ ಹಲವು ಮನೆಗಳಲ್ಲಿ ಕಾಣಿಸಿ ಕೊಂಡಿದೆ. ಇತರೆಡೆ ಕೆಲವು ಮನೆಗಳಲ್ಲಿ ಕಂಡು ಬಂದಿರುವ ಈ ಸಮಸ್ಯೆ ಇತರ ಗ್ರಾಮಗಳಿಗೆ ಹರಡಿದೆ. ತಿಂಗಳ ಚುಚ್ಚುಮದ್ದಿಗಾಗಿ ಪ್ರಾಥ ಮಿಕ ಆರೋಗ್ಯ ಕೇಂದ್ರಕ್ಕೆ ಕರೆದು ಕೊಂಡು ಬರುವ ಕೆಂಗಣ್ಣು ಸಮಸ್ಯೆ ಇದ್ದ ತಾಯಿ ಹಾಗೂ ಮಕ್ಕಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಒಂದು ವಾರ ಬಿಟ್ಟು ಬರಲು ಸೂಚನೆ ನೀಡಲಾಗಿದೆ. ಕೆಲವೆಡೆ ಮನೆಯ ಎಲ್ಲರಿಗೂ ಕೆಂಗಣ್ಣು ಸಮಸ್ಯೆ ಇದ್ದರೂ ಅವರು ಖರೀದಿಗಾಗಿ ಪೇಟೆಗೆ ಬರುವ ಕಾರಣ ಕೆಂಗಣ್ಣು ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿದೆ.
ಡಿ.5ರಿಂದ ಮಕ್ಕಳಿಗೆ ಮಿದುಳು ಜ್ವರ ವಿರುದ್ಧ ಲಸಿಕೆ ಕಾರ್ಯಕ್ರಮ ಆರಂಭವಾಗಲಿದೆ.