ಮಂಗಳೂರು : ದ.ಕ. ಜಿಲ್ಲಾ ಕಾಂಗ್ರೆಸ್ ಭವನದ ಪ್ರವೇಶ ದ್ವಾರದ ಮೆಟ್ಟಿಲುಗಳ ನವೀಕರಣ ಕಾಮಗಾರಿಯು ಇದೀಗ “ವಾಸ್ತು’ ವಿಚಾರದ ಚರ್ಚೆಗೆ ವೇದಿಕೆ ಒದಗಿಸಿದೆ.
ಕಚೇರಿ ಪ್ರವೇಶಕ್ಕೆ ಈ ಹಿಂದೆ 8 ಮೆಟ್ಟಿಲುಗಳಿದ್ದವು. ಇದನ್ನು ಬೆಸ ಸಂಖ್ಯೆಗೆ ಪರಿವರ್ತಿಸುವ ಕಾಮಗಾರಿ ನಡೆಯುತ್ತಿದೆ ಎಂಬ ಮಾತು ರಾಜಕೀಯವಾಗಿ ಚರ್ಚೆ ಹುಟ್ಟುಹಾಕಿದೆ.
ಆದರೆ “ಅಂಡರ್ ಗ್ರೌಂಡ್ ನೀರಿನ ಟ್ಯಾಂಕ್ ದುರಸ್ತಿಗಾಗಿ ಮೆಟ್ಟಿಲು ದುರಸ್ತಿ ಮಾಡಲಾ ಗಿದ್ದು, ಇದರಲ್ಲಿ ವಾಸ್ತು ವಿಚಾರ ಇಲ್ಲ’ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ.
ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರು “ಹಿಂದೂಗಳ ಪ್ರತೀ ಆಚರಣೆಯನ್ನೂ ಅಣಕ ಮಾಡುವ ಕಾಂಗ್ರೆಸ್ ಈಗ ಸೋಲಿನ ಭೀತಿಯಿಂದ ವಾಸ್ತುದೋಷದ ಮೊರೆ ಹೋಗಿರುವುದು ತಲೆಗೆ ಹೊಯ್ದ ನೀರು ಕಾಲಿಗೆ ಬರಲೇಬೇಕು ಎಂಬು ದಕ್ಕೆ ಉದಾಹರಣೆ’ ಎಂದಿದ್ದಾರೆ.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಪ್ರತಿಕ್ರಿಯಿಸಿ, “ಕಟ್ಟಡಕ್ಕೆ 10 ವರ್ಷ ಆಗಿದೆ. ಹೀಗಾಗಿ ಮೆಟ್ಟಿಲು, ನೀರಿನ ಟ್ಯಾಂಕ್ ಸಹಿತ ಕೆಲವು ಗಾರೆ ಕೆಲಸ ಮಾಡಲು ಇತ್ತು. ಅದನ್ನೇ ವಾಸ್ತು ಎಂಬ ರೀತಿಯಲ್ಲಿ ಬಿಂಬಿ ಸುವುದು ಸರಿಯಲ್ಲ’ ಎಂದರು.