ಮಣಿಪಾಲ: ಸೇನಾಧಿಕಾರಿಯೆಂದು ಕಾಲ್ ನಲ್ಲಿ ಪರಿಚಯಿಸಿಕೊಂಡು ವ್ಯಕ್ತಿಯೊಬ್ಬರಿಗೆ ವಂಚಿಸಿದ ಘಟನೆ ಮಣಿಪಾಲದಲ್ಲಿ ನಡೆದಿದೆ. ಪದ್ಮನಾಭ ಎಂಬವರು ಮೋಸ ಹೋದ ವ್ಯಕ್ತಿಯಾಗಿದ್ದಾರೆ.
ಇವರಿಗೆ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ ತಾನು ಸೇನಾ ಅಧಿಕಾರಿ ಎಂದು ಪರಿಚಯಿಸಿಕೊಂಡು ತನಗೆ ಮನೆಯೊಂದು ಬಾಡಿಗೆಗೆ ಬೇಕು ಎಂದು ಕೇಳಿದ್ದಾನೆ. ಆಗ ಪದ್ಮನಾಭ ಎಂಬವರು ಆತನಿಗೆ 25000 ಮುಂಗಡ ಮತ್ತು 13000 ತಿಂಗಲ ಬಾಡಿಗೆ ಎಂದು ತಿಳಿಸಿದ್ದಾರೆ.
ಆಗ ಆತ ಹಣ ಹಾಕಲು ಇವರಲ್ಲಿ ಗೂಗಲ್ ಪೇಯಲ್ಲಿ ಒಂದು ರೂ. ಹಾಕುವಂತೆ ಹೇಳಿದ್ದಾನೆ. ಪದ್ಮನಾಭ ಅವರು ನಂಬಿ 1ರೂ ಹಾಕಿದ್ದು ಅವನಲ್ಲಿ ಕರೆಯಲ್ಲಿ ಮಾತನಾಡುತ್ತಿದ್ದಂತೆ ಇವರ ಖಾತೆಯಿಂದ 38000 ರೂ. ಆತನ ಖಾತೆಗೆ ವರ್ಗಾವಣೆಯಾಗಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




