Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ರೋಹನ್ ಸಿಟಿ ಬಿಜೈ “ಹೂಡಿಕೆಯ ಮೇಲೆ 7.50% ಖಚಿತ ಪ್ರತಿಫಲ” ಸ್ಕೀಮಿನ ಅನಾವರಣ
    ಇತ್ತೀಚಿನ ಸುದ್ದಿ

    ರೋಹನ್ ಸಿಟಿ ಬಿಜೈ “ಹೂಡಿಕೆಯ ಮೇಲೆ 7.50% ಖಚಿತ ಪ್ರತಿಫಲ” ಸ್ಕೀಮಿನ ಅನಾವರಣ

    November 2, 2023
    Share

    ಮಂಗಳೂರು: ರೋಹನ್ ಕಾರ್ಪೋರೇಶನ್ ಸಂಸ್ಥೆಯ ಬಹು ನಿರೀಕ್ಷಿತ, ಅತೀದೊಡ್ಡ ಮತ್ತು ಅತ್ಯಂತ ವಿಶೇಷ ಯೋಜನೆಯಾದ ‘ರೋಹನ್ ಸಿಟಿ’ ಬಿಜೈ ಬೃಹತ್ ಕಟ್ಟಡದ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ. ನವೆಂಬರ್ – ಡಿಸೆಂಬರ್ ತಿಂಗಳಲ್ಲಿ ಬರುವ ದೀಪಾವಳಿ ಮತ್ತು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬಿಜೈ ಮುಖ್ಯ ರಸ್ತೆಯಲ್ಲಿನ ‘ರೋಹನ್ ಸಿಟಿ’ ವಾಣಿಜ್ಯ ಮಳಿಗೆಗಳ ಹೂಡಿಕೆದಾರರಿಗೆ ಖಚಿತ 7.50% ಪ್ರತಿಫಲ ನೀಡುವ ಸ್ಟೀಮನ್ನು ಎರಡು ತಿಂಗಳ ಅವಧಿಗೆ ಹಮ್ಮಿಕೊಳ್ಳಲಾಗಿದೆ.

    ಈ ಎರಡು ತಿಂಗಳುಗಳಲ್ಲಿ ವಿಶೇಷ ದರ ಕಡಿತದೊಂದಿಗೆ ವಾಣಿಜ್ಯ ಮಳಿಗೆಗಳನ್ನು ಮಾರಾಟ ಮಾಡಲಾಗುವುದು. ಬ್ಯಾಂಕ್ ಹಾಗೂ ಇನ್ನಿತರ ವಿತ್ತೀಯ ಸಂಸ್ಥೆಗಳಲ್ಲಿ ನಿರಖು ಠೇವಣಿಗಳ ಮೇಲಿನ ಬಡ್ಡಿ ದರವು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಖಚಿತ 7.50% ಪ್ರತಿಫಲ ನೀಡುವ ವಾಣಿಜ್ಯ ಮಳಿಗೆಗಳಲ್ಲಿ ಹೂಡಿಕೆ ಮಾಡುವುದು ಲಾಭದಾಯಕವಾಗಿದೆ” ಎಂದು ರೋಹನ್ ಕಾರ್ಪೋರೇಶನ್ ಸಿಎಂಡಿ ರೋಹನ್ ಮೊಂತೇರೋ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

    “ವಾಣಿಜ್ಯ ಮಳಿಗೆಗಳ ಮೌಲ್ಯವು ವರ್ಷಗಳು ಕಳೆದಂತೆ ಏರಿಕೆಯಾಗುತ್ತಾ ಸಾಗುತ್ತಿವೆ. ‘ರೋಹನ್‌ ಸಿಟಿ’ ರೋಹನ್ ಕಾರ್ಪೊರೇಷನ್ ಇದರ ಇದುವರೆಗಿನ ಅತಿದೊಡ್ಡ ಮತ್ತು ಅತ್ಯಂತ ವಿಶೇಷ ಯೋಜನೆಯಾಗಿದೆ. 284 ಪ್ರತ್ಯೇಕ ಘಟಕಗಳನ್ನು ಒಳಗೊಂಡಿರುವ 2 ಲಕ್ಷ ಚದರ ಅಡಿ ವಾಣಿಜ್ಯ ಮಳಿಗೆಗಳಿವೆ. ಈ ಯೋಜನೆಯು 6 ಲಕ್ಷ ಚದರ 6 ಲಕ್ಷ ಚದರ ಅಡಿ ವಸತಿ ಪ್ರದೇಶವನ್ನು ಒಳಗೊಂಡಿರುವ ಸಮುಚ್ಚಯವಾಗಿದ್ದು, ಒಟ್ಟು 546 ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿದೆ. ವಸತಿ ಆಯ್ಕೆಗಳು ಡ್ಯುಪ್ಲೆಕ್ಸ್, 6 ಬಿಎಚ್‌ಕೆ, 4 ಬಿಎಚ್‌ಕೆ, 1405ರಿಂದ 1900 ಚದರ ಅಡಿ 3 ಬಿಎಚ್‌ಕೆ, 1075 ರಿಂದ 1135 ಚದರ ಅಡಿ 2 ಬಿಎಚ್‌ಕೆ ಮತ್ತು 700 ರಿಂದ 815 ಚದರ ಅಡಿ 1 ಬಿಎಚ್‌ಕೆ ಫ್ಲ್ಯಾಟುಗಳೊಂದಿಗೆ ವಿವಿಧ ಅಗತ್ಯಗಳನ್ನು ಪೂರೈಸುತ್ತವೆ. ಯಾಂತ್ರೀಕೃತ ಪಾರ್ಕಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ದ್ವಿಚಕ್ರ ಮತ್ತು ಚತುಶ್ಚಕ್ರ ವಾಹನಗಳಿಗೆ ಅವಕಾಶ ಕಲ್ಪಿಸುತ್ತದೆ. ಉನ್ನತವಾಗಿ ವಿನ್ಯಾಸಗೊಳಿಸಿದ ವಸತಿ ಮತ್ತು ವಾಣಿಜ್ಯ ಸ್ಥಳಗಳೊಂದಿಗೆ, ಆಧುನಿಕ ಪಾರ್ಕಿಂಗ್ ವ್ಯವಸ್ಥೆಯೊಂದಿಗೆ, ರೋಹನ್ ಸಿಟಿ ನಿವಾಸಿಗಳಿಗೆ ಉತ್ಕೃಷ್ಟ ಜೀವನ ನಡೆಸಲು ಅನುಕೂಲ ವಾತಾವರಣವನ್ನು ನೀಡುತ್ತದೆ ಮತ್ತು ವಾಣಿಜ್ಯ ಉದ್ಯಮಗಳಿಗೆ ವ್ಯಾಪಾರ ಕೇಂದ್ರವಾಗಿದೆ” ಎಂದರು.  

    ರೋಹನ್ ಸಿಟಿ ಸಮುಚ್ಚಯದ ವೈಶಿಷ್ಟ್ಯಗಳು:

    2 ಹಂತಗಳಲ್ಲಿ 35000 ಚದರ ಅಡಿ ಹೈಪರ್ ಮಾರುಕಟ್ಟೆ ವಾಣಿಜ್ಯ ಮಳಿಗೆಗಳಿಗೆ 2 ಎಸ್ಕಲೇಟರ್ ವ್ಯವಸ್ಥೆ ವಸತಿ, ವಾಣಿಜ್ಯ, ಸೂಪರ್ ಮಾರ್ಕೆಟ್, ಹೊಟೇಲ್, ಅತ್ಯಾಧುನಿಕ ಕ್ಲಬ್ ಹಾಗೂ ಇನ್ನಿತರ ಸೌಲಭ್ಯಗಳು ಒಂದೇ ಸೂರಿನಡಿ ಮಂಗಳೂರಿನ ಹೃದಯಭಾಗದಲ್ಲಿ ಅತೀ ಸಮಂಜಸ ಬೆಲೆಗಳಲ್ಲಿ ಲಕ್ಷುರಿ ಸೌಲಭ್ಯಗಳು. ಪ್ರಮುಖ ನ್ಯಾಷನಲ್ ಬ್ಯಾಂಕ್‌ಗಳಿಂದ ಪ್ರಾಜೆಕ್ಟ್ ಅಂಗೀಕೃತ ತ್ವರಿತ ಸಾಲ ಸೌಲಭ್ಯ ಸೇವೆ ಜನರೇಟರ್‌ಗಳೊಂದಿಗೆ 100% ಪವರ್ ಬ್ಯಾಕಪ್ ಸ್ವಯಂಚಾಲಿತ ಪವರ್ ಚೇಂಜ್ ಓವರ್ ವ್ಯವಸ್ಥೆ ಅತ್ಯಾಧುನಿಕ ಭದ್ರತಾ ವ್ಯವಸ್ಥೆ, ಎಲೆಕ್ಟಿಕ್ ಕಾರ್ ಚಾರ್ಜಿಂಗ್ ವ್ಯವಸ್ಥೆ ಹಸಿರುವನ, ಉದ್ಯಾನವನ ಘನ ತ್ಯಾಜ್ಯ ಸಂಸ್ಕರಣಾ ಘಟಕ ಸೌರ ಶಕ್ತಿ, ಸಂಗ್ರಹ ಘಟಕ, ಲೈಟಿಂಗ್ ಆಟೊಮೇಷನ್ ಅಂತರಾಷ್ಟ್ರೀಯ ದರ್ಜೆಯ ಸಿಟಿ ಕ್ಲಬ್‌ನ ವಿಶೇಷತೆಗಳು ಸಂಪೂರ್ಣ ಹವಾನಿಯಂತ್ರಿತ, ವಿಶಾಲ ಎಂಟ್ರೆನ್ಸ್ ಲಾಬಿ ಫ್ಯಾಮಿಲಿ ರೆಸ್ಟೋರೆಂಟ್, ಕಾಫಿ ಶಾಪ್, ಒಳಾಂಗಣ ಕ್ರೀಡೆ, ಬಾಸ್ಕೆಟ್ ಬಾಲ್ ಕೋರ್ಟ್, ಬಾಡ್ಮಿಂಟನ್ ಕೋರ್ಟ್    ವಿಡಿಯೋ ಗೇಮ್ಸ್ ವಲಯ, ಸುಸಜ್ಜಿತ ಜಿಮ್ – ಸ್ಪಾ, ಯುನಿಸೆಕ್ಸ್ ಸಲೂನ್ ಆರ್ಯುವೇದಿಕ್ ವೆಲ್‌ನೆಸ್ ಸೆಂಟರ್ 3D ಥಿಯೇಟರ್ ಮಲ್ಟಿ-ಪರ್ಪಸ್ ಹಾಲ್ ಸ್ವಿಮ್ಮಿಂಗ್ ಪೂಲ್ ಜಾಗಿಂಗ್ ಟ್ರ್ಯಾಕ್ ಸೀನಿಯರ್ ಸಿಟಿಜನ್ ಪಾರ್ಕ್ ಚಿಣ್ಣರ ಆಟದ ವಲಯ ಸುಸಜ್ಜಿತ ಗ್ರಂಥಾಲಯ – ವಿದ್ಯಾರ್ಥಿ ಕಲಿಕಾ ಕೊಠಡಿ ಹಾಗೂ ಇನ್ನಿತರ ಸೌಕರ್ಯಗಳು

    ಹೆಚ್ಚಿನ ವಿವರಗಳಿಗಾಗಿ ರೋಹನ್ ಸಿಟಿ, ಬಿಜೈ ಮುಖ್ಯರಸ್ತೆಯ ಕಛೇರಿ ಅಥವಾ ದೂರವಾಣಿ 9845490100 / 9845607725 / 9845607724 1 9036392627 ಸಂಖ್ಯೆಗಳನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ www.rohancity.in ಅಂತರ್‌ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ. ಪತ್ರಿಕಾಗೋಷ್ಠಿಯಲ್ಲಿ ರೋಹನ್ ಕಾರ್ಪೊರೇಷನ್ ಚೇರ್ ಮೆನ್ ರೋಹನ್ ಮೊಂತೇರೋ, ಜನರಲ್ ಮೆನೇಜರ್ ಸುಮನಾ ಎಂ.ಡಿ., ಅಡ್ಮಿನ್ ಲೆಸ್ಲಿ, ಶಮಿನ ಸೋನ್ಸ್, ಡಿಯೋನ್ ಮೊಂತೇರೋ, ಟೈಟಸ್ ನೋರೋನ್ಹ ಮತ್ತಿತರರು ಉಪಸ್ಥಿತರಿದ್ದರು.

    Post Views: 193

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.