Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಬಹುಕೋಟಿ ವಂಚನೆ ಪ್ರಕರಣ: ಆರೋಪಿ ರೋಶನ್ ಸಲ್ದಾನನ ವಹಿವಾಟುಗಳ ಶೋಧ ಕಾರ್ಯ
    ಇತ್ತೀಚಿನ ಸುದ್ದಿ

    ಬಹುಕೋಟಿ ವಂಚನೆ ಪ್ರಕರಣ: ಆರೋಪಿ ರೋಶನ್ ಸಲ್ದಾನನ ವಹಿವಾಟುಗಳ ಶೋಧ ಕಾರ್ಯ

    August 8, 2025
    Share

    ಮಂಗಳೂರು: ಬಹುಕೋಟಿ ವಂಚನೆ ಪ್ರಕರಣದ ಆರೋಪಿ ರೋಶನ್ ಸಲ್ದಾನ ಮತ್ತಿತರರ ಪ್ರಕರಣಕ್ಕೆ ಸಂಬಂಧಿಸಿದಂತೆ ಡೈರೆಕ್ಟೊರೇಟ್ ಆಫ್ ಎನ್‌ಫೋರ್ಸ್‌ಮೆಂಟ್ ಮಂಗಳೂರು ಸಬ್ ರೆನಲ್ ಕಚೇರಿಯು ಹಣ ವರ್ಗಾವಣೆ ತಡೆ ಕಾಯ್ದೆಯಡಿ ನಗರದ 5 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.

    ಕಡಿಮೆ ಬಡ್ಡಿದರದಲ್ಲಿ ಸಾಲ ಒದಗಿಸುವ ನೆಪದಲ್ಲಿ ಅನೇಕ ಉದ್ಯಮಿಗಳಿಂದ ಸ್ಟಾಂಪ್ ಟ್ಯೂಟಿಗಾಗಿ ಹಣ ವಸೂಲಿ ಮಾಡಿ, ಭರವಸೆ ನೀಡಿದ ಸಾಲಗಳನ್ನು ನೀಡದೆ ವಂಚನೆ ಮಾಡಿದ ರೋಶನ್ ಸಲ್ದಾನ, ಆತನ ಪತ್ನಿ ಡಫ್ನಿ ನೀತು ಡಿಸೋಜ ಮತ್ತಿತರರ ವಿರುದ್ಧ ಕಾನೂನು ಜಾರಿ ಸಂಸ್ಥೆಗಳು ದಾಖಲಿಸಿದ ಅನೇಕ ಎಫ್‌ಐಆರ್‌ಗಳ ಆಧಾರದ ಮೇಲೆ ಜಾರಿ ನಿರ್ದೇಶನಾಲಯ (ED) ತನಿಖೆ ಆರಂಭಿಸಿದೆ.

    ಪ್ರಮುಖ ಆರೋಪಿ ರೋಶನ್ ಸಲ್ದಾನ ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾನೆ. ಶೋಧ ಕಾರ್ಯಾಚರಣೆಯ ವೇಳೆ ಈ ಆರೋಪಿಗಳು ಸ್ಟಾಂಪ್ ಡ್ಯೂಟಿ ನೆಪದಲ್ಲಿ ಅನೇಕ ಉದ್ಯಮಿಗಳಿಂದ ಹೊಸದಾಗಿ ರಚಿಸಲಾದ ನಕಲಿ ಸಂಸ್ಥೆಗಳ ಮೂಲಕ ಸುಮಾರು 39 ಕೋ.ರೂ.ಗಳನ್ನು ಸಂಗ್ರಹಿಸಿರುವುದು ಕಂಡುಬಂದಿದೆ.

    ಅದಕ್ಕೆ ಸಂಬಂಧಿಸಿದ ಡೈರಿಗಳು ಮತ್ತು ದಾಖಲೆಗಳು ಲಭ್ಯವಾಗಿದ್ದು, ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೀಗೆ ಸಂಗ್ರಹಿಸಿದ ಹಣವನ್ನು ಆರೋಪಿಗಳು ವೈಯಕ್ತಿಕ ಮತ್ತು ಸ್ವಂತ ವ್ಯಾಪಾರ ಉದ್ದೇಶಗಳಿಗೆ ಬಳಸಿಕೊಂಡಿದ್ದಾರೆ. ಅದರ ಪ್ರಮುಖ ಭಾಗವನ್ನು ನಕಲಿ ಸಂಸ್ಥೆಗಳ ಮೂಲಕ ಬೇರೆಡೆಗೆ ವರ್ಗಾಯಿಸಿದ್ದಾರೆ ಎಂಬುದು ಕೂಡ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

    ಶೋಧ ಕಾರ್ಯಾಚರಣೆಯ ಸಂದರ್ಭ ಬ್ಯಾಂಕ್ ಖಾತೆಗಳಲ್ಲಿದ್ದ 3.75 ಕೋ.ರೂ.ಗಳನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೆ ತನಿಖೆಯ ವೇಳೆ ಆರೋಪಿ ರೋಶನ್ ಸಲ್ದಾನನು ತಾನು ನಿರ್ವಹಿಸುತ್ತಿದ್ದ ಕಾಲ್ಪನಿಕ ಸಂಸ್ಥೆಗಳಿಂದ ತನ್ನ ಪತ್ನಿ ಡಫ್ನಿ ನೀತು ಡಿಸೋಜಳ ಹೆಸರಿನಲ್ಲಿ 5 ಮೀನುಗಾರಿಕೆ ದೋಣಿಗಳನ್ನು ಖರೀದಿಸಲು 5.75 ಕೋ.ರೂ. ವರ್ಗಾಯಿಸಿರುವುದು ಪತ್ತೆಯಾಗಿದೆ. ಅವುಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಶೋಧದ ವೇಳೆ ವಶಪಡಿಸಿಕೊಳ್ಳಲಾದ ಮತ್ತು ಸ್ಥಗಿತಗೊಳಿಸಲಾದವುಗಳ ಒಟ್ಟು ಮೌಲ್ಯ 9.5 ಕೋ.ರೂ. ಆಗಿದೆ ಎಂದು ಪ್ರಕಟನೆ ತಿಳಿಸಿದೆ.

    Post Views: 157

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.