ಬೆಂಗಳೂರು : ಬೆಂಗಳೂರು ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಸುವ ಗ್ರಾಹಕರಿಗೆ ಬಿಬಿಎಂಪಿ (BBMP) ಬಿಗ್ ಶಾಕ್ ನೀಡಿದ್ದು, ನಿಷೇಧಿತ ಪ್ಲಾಸ್ಟಿಕ್ ಬಳಕೆ ವೇಳೆ ಸಿಕ್ಕಿ ಬಿದ್ದರೆ ದಂಡ ಪ್ರಯೋಗಿಸಲು ಬಿಬಿಎಂಪಿ ನಿರ್ಧರಿಸಿದೆ.
ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಉತ್ಪಾದನೆ, ಸಂಗ್ರಹಣೆ, ವಿತರಣೆ, ಮಾರಾಟ ಹಾಗೂ ಬಳಕೆ ನಿಷೇಧಿಸಲಾಗಿದೆ. ಆದರೆ ವ್ಯಾಪಾರಿಗಳು, ಗ್ರಾಹಕರು ಪ್ಲಾಸ್ಟಿಕ್ ಮೇಲೆ ಅವಲಂಬಿತರಾಗಿದ್ದಾರೆ. ಇದನ್ನು ತಪ್ಪಿಸಲು ವ್ಯಾಪಾರಿಗಳು, ಗ್ರಾಹಕರು ನಿಷೇಧಿತ ಪ್ಲ್ಯಾಸ್ಟಿಕ್ ಬಳಸಿದರೆ ದಂಡ ವಿಧಿಸಲು ಬಿಬಿಎಂಪಿ ಮುಂದಾಗಿದೆ. ಇನ್ಮುಂದೆ ಪ್ಲಾಸ್ಟಿಕ್ ಕೈ ಚೀಲ ಬಳಸಿದ್ದು ಕಂಡು ಬಂದರೆ ಗ್ರಾಹಕರಿಗೆ 200 ರೂ. ದಂಡ ವಿಧಿಸಲಿದೆ. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮದಡಿ ಮಾಲಿನ್ಯ ನಿಯಂತ್ರಣ ಮಂಡಳಿ ದಂಡದ ಪ್ರಮಾಣ ಕುರಿತು ಆದೇಶ ಹೊರಡಿಸಿದೆ.