ಕೇರಳ: ಓಣಂ ಹಬ್ಬದ ಹಿನ್ನೆಲೆಯಲ್ಲಿ ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಾಲಯವು ಸೆಪ್ಟೆಂಬರ್ 13ರಂದು ತೆರೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸಂಜೆ 5 ಗಂಟೆಗೆ ದೇವಸ್ಥಾನದ ಬಾಗಿಲನ್ನು ತೆರೆಯಲಾಗುತ್ತದೆ, ಸೆಪ್ಟೆಂಬರ್ 17 ರಿಂದ ಐದು ದಿನಗಳ ಮಾಸಿಕ ಪೂಜೆ ನಡೆಯಲಿದೆ. ಸೆಪ್ಟೆಂಬರ್ 21 ರಂದು ರಾತ್ರಿ 10 ಗಂಟೆಗೆ ಅಥಾಜ ಪೂಜೆ ಮತ್ತು ಹರಿವರಾಸನದ ನಂತರ ದೇವಾಲಯವನ್ನು ಮುಚ್ಚಲಾಗುತ್ತದೆ.
ಉದಯಾಸ್ತಮಾನ ಪೂಜೆ ಮತ್ತು ಅಷ್ಟಾಭಿಷೇಕಗಳು ದೇವಾಲಯದಲ್ಲಿ ನಡೆಯಲಿರುವ ಇತರ ಧಾರ್ಮಿಕ ವಿಧಿಗಳಾಗಿವೆ. ಸಮಾರಂಭದ ನಂತರ ಅನ್ನದಾನ ಸಭಾಂಗಣದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ. ಹಬ್ಬದ ದಿನಗಳಲ್ಲಿ ಕಲಭಾಭಿಷೇಕ, ಪಡಿಪೂಜೆ, ಪುಷ್ಪಾಭಿಷೇಕ ಸೇರಿದಂತೆ ವಿಶೇಷ ಆಚರಣೆಗಳು ನಡೆಯಲಿವೆ.
ದೇವರ ಹೆಸರಿನಲ್ಲಿ ದೀಪದ ಮುಂದೆ ಇಟ್ಟಿರುವ ಬಾಳೆ ಎಲೆಯ ಮೇಲೆ ಸಿಹಿತಿಂಡಿಗಳು ಸೇರಿದಂತೆ ಹಬ್ಬದ ಭಕ್ಷ್ಯಗಳನ್ನು ಇಡುತ್ತಾರೆ.