ಉಡುಪಿ : ಉಡುಪಿಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಧರ್ಮದಂಗಲ್ ಮುಂದುವರೆದಿದ್ದು, ಕೊಟೇಶ್ವರ ಹಬ್ಬದ ಬಳಿಕ ಇದೀಗ ಬೈಂದೂರಿನ ಉಪ್ಪುಂದ ದುರ್ಗಾಪರಮೇಶ್ವರಿ ವಾರ್ಷಿಕ ಜಾತ್ರೆಯಲ್ಲಿ ಧರ್ಮದಂಗಲ್ ಮುಂದುವರೆದಿದೆ.
ದೇವಸ್ಥಾನ ವ್ಯಾಪ್ತಿಯಲ್ಲಿ ಅಂಗಡಿಯಿಟ್ಟು ಹಿಂದೂಗಳು ವ್ಯಾಪಾರ ಮಾಡುತ್ತಿದ್ದು, ಹಿಂದೂಗಳ ಅಂಗಡಿಗಳಿಗೆ ಕೇಸರಿ ಬಾವುಟವನ್ನು ಹಿಂದೂ ಸಂಘಟನೆಗಳು ಹಾಕಿದ್ದು, ದೇವಸ್ಥಾನದ ವ್ಯಾಪ್ತಿಯಿಂದ ಹೊರಗೆ ಮುಸಲ್ಮಾನರಿಂದ ವ್ಯಾಪಾರ ವಹಿವಾಟು ನಡೆಯುತ್ತಿದೆ. ದೇವಸ್ಥಾನದ ಹೊರಗೆ ಇರುವ ಖಾಸಗಿ ಜಮೀನಿನಲ್ಲಿ ಮುಸ್ಲಿಂ ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿದ್ದಾರೆ.
ಮುಂದಿನ ವರ್ಷದಿಂದ ರಥ ಸಂಚರಿಸುವ ವ್ಯಾಪ್ತಿಯಲ್ಲಿ ಎಲ್ಲೂ ಮುಸಲ್ಮಾನರಿಗೆ ಅವಕಾಶ ಕೊಡಬಾರದು, ಮುಂದಿನ ವರ್ಷದಿಂದ ಕಟ್ಟುನಿಟ್ಟಿನ ನಿಯಮ ಜಾರಿಗೆ ಬರಬೇಕು, ಹಿಂದುಗಳ ಜಾತ್ರೆಯಲ್ಲಿ ಹಿಂದೂಯೇತರರಿಗೆ ಅವಕಾಶ ಕೊಡಬಾರದು ಎಂದು ಹಿಂದೂ ಸಂಘಟನೆಯ ಮುಖಂಡ ನವೀನ್ ಚಂದ್ರ ಉಪ್ಪುಂದ ಹೇಳಿಕೆ ನೀಡಿದ್ದಾರೆ.