ಬಂಟ್ವಾಳ: ಹೋಟೆಲ್‌ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ನೆತ್ರಕೆರೆ ನಿವಾಸಿ ಹರೀಶ್ ಎಂದು ಗುರುತಿಸಲಾಗಿದೆ.
ಕಳ್ಳಿಗೆ ಗ್ರಾಮದ ನೆತ್ರಕೆರೆ ಹೊಟೇಲ್‌ನಲ್ಲಿ ಪರವಾನಗಿ ಇಲ್ಲದ ಮದ್ಯವನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಾಳಿಯ ವೇಳೆ ಹೋಟೆಲ್‌ನಲ್ಲಿ ರೂ.4 ಸಾವಿರ ಮೌಲ್ಯದ ರೂ.50. ಮುಖಬೆಲೆಯ 90 ml ನ 80 ಸ್ಯಾಚೆಟ್‌ಗಳು ಹಾಗೂ ಮಾರಾಟದ ಬಳಿಕ ಬಂದ ರೂ.1000 ಸಾವಿರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.




