ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಅನಧಿಕೃತ ಮರಳು ಸಾಗಾಣಿಕೆ ನಿಯಂತ್ರಿಸಲು ಮತ್ತು ಸಾರ್ವಜನಿಕರ ಮರಳಿನ ಬೇಡಿಕೆಗಳನ್ನು ಪೂರೈಸುವ ಸಲುವಾಗಿ ಈ ಹಿಂದೆ ಜಾರಿಯಲ್ಲಿದ್ದ https://dksandbazar.comತಂತ್ರಾಂಶವನ್ನು ಮರುಸ್ಥಾಪಿಸಲಾಗಿದೆ. ಸಾರ್ವಜನಿಕರು ಈ ಆ್ಯಪ್ ಮೂಲಕ ಸಾಮಾನ್ಯ ಮರಳನ್ನು ನೇರವಾಗಿ ಖರೀದಿಸಬಹುದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಸದ್ಯಕ್ಕೆ ಮರಳಿನ ಕೊರತೆ ಎದುರಾಗಿದ್ದು, ಇ-ಸ್ಯಾಂಡ್ ನಲ್ಲಿ ಮರಳು ಲಭ್ಯವಾಗುತ್ತಿಲ್ಲ. ಕೆಲದಿನಗಳ ಹಿಂದೆ ಕುಂದಾಪುರ ಭಾಗದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಲಭ್ಯವಿದ್ದ ಮರಳು ಬೇಡಿಕೆ ಹೆಚ್ಚಿದಂತೆ ಕಾದಿರಿಸಿದವರಿಗೆ ಮರಳು ಪೂರೈಕೆಯಾಗುತ್ತಿದ್ದು, ಇ-ಸ್ಯಾಂಡ್ ವೆಬ್‌ಸೈಟ್‌ನಲ್ಲಿ ಸದ್ಯಕ್ಕೆ ಆನೈನ್ ಬುಕ್ಕಿಂಗ್‌ಗೆ ತೆರೆದುಕೊಳ್ಳುತ್ತಿಲ್ಲ. ಮತ್ತೆ ಮರಳು ಲಭ್ಯವಾದಲ್ಲಿ ಬುಕ್ಕಿಂಗ್ ಆಪ್ಸನ್ ತೆರೆದುಕೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಅನಧಿಕೃತ ಮರಳು ಗಾರಿಕೆಗೆ ಕಡಿವಾಣಕ್ಕೆ ಕಠಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅನಧಿಕೃತ ಮರಳುಗಾರಿಕೆ ಕಂಡುಬಂದಲ್ಲಿ ಸಾರ್ವಜನಿಕರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ದೂರವಾಣಿ ಸಂಖ್ಯೆ: 8762339932ಗೆ ತಿಳಿಸುವಂತೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರು ಮಾದ್ಯಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.