Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಪಡುಬಿದ್ರಿ: ಸಸಿಹಿತ್ಲುವಿನಲ್ಲಿ ಕಡಲು ಪಾಲಾದ ಯುವಕನ ಶವ ಹೆಜಮಾಡಿಯಲ್ಲಿ ಪತ್ತೆ
    ಇತ್ತೀಚಿನ ಸುದ್ದಿ

    ಪಡುಬಿದ್ರಿ: ಸಸಿಹಿತ್ಲುವಿನಲ್ಲಿ ಕಡಲು ಪಾಲಾದ ಯುವಕನ ಶವ ಹೆಜಮಾಡಿಯಲ್ಲಿ ಪತ್ತೆ

    May 15, 2024
    Share

    ಪಡುಬಿದ್ರಿ: ಕಳೆದ ಮೂರು ದಿನಗಳ ಹಿಂದೆ ಸಸಿಹಿತ್ಲು ಮುಂಡಾ ಬೀಚ್ ಬಳಿಯ ಅಳಿವೆ ಬಾಗಿಲಲ್ಲಿ ಮರುವಾಯಿ ಚಿಪ್ಪು ಹೆಕ್ಕಲು ಹೋಗಿ ಸಮುದ್ರ ಪಾಲಾದ ಯುವಕನ ಶವ ಹೆಜಮಾಡಿ ಕೋಡಿ ಸಮುದ್ರದಲ್ಲಿ ಮಂಗಳವಾರ ಸಂಜೆ ಪತ್ತೆಯಾಗಿದೆ. ಶವವಾಗಿ ಪತ್ತೆಯಾದ ಯುವಕ ಬಜಪೆ ಅದ್ಯಪಾಡಿ ಹಳೆ ವಿಮಾನ ನಿಲ್ದಾಣ ಬಳಿ ನಿವಾಸಿ ಅಭಿಲಾಶ್ (24). ಈತ ಮಂಗಳೂರು ರೈಲ್ವೆಯಲ್ಲಿ ಗುತ್ತಿಗೆದಾರನಾಗಿ ಕಾರ್ಯ ನಿರ್ವಾಹಿಸುತ್ತಿದ್ದು, ತನ್ನ ಸುಮಾರು ಹತ್ತು ಮಂದಿ ಗೆಳೆಯರೊಂದಿಗೆ ಮುಲ್ಕಿಯ ಕೊಳಚಿ ಕಂಬಳ ಶಾಂಭವಿ ಹೊಳೆಗೆ ಮರುವಾಯಿ ಚಿಪ್ಪು ಹಾಗೂ ಏಡಿ ಹಿಡಿಯಲು ಬಂದಿದ್ದು, ಅಲ್ಲಿ ಹೊಳೆಯಲ್ಲಿ ನೀರಿನ ಇಳಿತ ಇದ್ದ ಕಾರಣ ಮುಂದೆ ಸುಮಾರು ಎರಡು ಕೀ.ಮಿ. ನಡೆದುಕೊಂಡು ಹೋಗಿ ಸಸಿಹಿತ್ಲು ಅಳಿವೆ ಬಳಿ ಸಮುದ್ರಕ್ಕಿಳಿದು ತೆರೆಯ ಅಬ್ಬರಕ್ಕೆ ಈತ ನೀರು ಪಾಲಾಗಿದ್ದ. ಬಹಳಷ್ಟು ಮುಳುಗು ತಜ್ಞರು ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಇದೀಗ ಹೆಜಮಾಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಸ್ಥಳೀಯ ಯುವಕರು ಶವವನ್ನು ದಡ ಸೇರಿಸಿದ್ದು, ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

    Post Views: 157

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.