ಮಂಗಳೂರು: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ದ್ವಿಗುಣಗೊಳಿಸಿ ಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ 21.50 ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ನಗರದ ಸೆನ್ ಠಾಣೆಗೆ ದೂರು ನೀಡಲಾಗಿದೆ. ತಮಿಳುನಾಡಿನ ಕಣ್ಣನ್ (45)ಎಂಬವರ ಫೇಸ್‌ಬುಕ್ ಖಾತೆಗೆ ಬಂದ ಲಿಂಕ್ ತೆರೆದಾಗ ಅದರಲ್ಲಿದ್ದ ಮಾಹಿತಿಯನ್ನು ನಂಬಿ ಟ್ರೇಡಿಂಗ್ ಖಾತೆ ತೆರೆದಿದ್ದರು ಎನ್ನಲಾಗಿದೆ. ಬಳಿಕ ಅವರ ಖಾತೆಯಿಂದ ಮೂರು ಬಾರಿ ಹಣ ವರ್ಗಾಯಿಸಿ ಕೊಳ್ಳಲಾಗಿದೆ. ಆದರೆ ಯಾವುದೇ ಮೊತ್ತ ವಾಪಸ್ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ.