ಉಡುಪಿ: ಎಲೆಕ್ಟ್ರಿಕಲ್ ಮತ್ತು ಅನಿಲ ಚಾಲಿತ ವಾಹನಗಳು ಇತ್ತೀಚೆಗೆ ಬೆಂಕಿಗಾಹುತಿಯಾಗುತ್ತಿರುವುದು ಸಾಮಾನ್ಯವಾಗಿದೆ. ಆದರೆ, ಕಾರ್ಕಳ ತಾಲೂಕಿನ ಎಣ್ಣೆಹೊಳೆಯಲ್ಲಿ ಪೆಟ್ರೋಲ್ ಚಾಲಿತ ಸ್ಕೂಟರ್ ಬೆಂಕಿಗೆ ಆಹುತಿಯಾಗಿದೆ.
ರಸ್ತೆಯಲ್ಲಿ ಸಾಗುತ್ತಿದ್ದಾಗಲೇ ಒಮ್ಮೆಗೇ ಆಫ್ ಆದ ಸ್ಕೂಟಿಯಲ್ಲಿ ಒಮ್ಮಿಂದೊಮ್ಮೆಗೇ ಬೆಂಕಿ ಕಾಣಿಸಿಕೊಂಡು ಧಗಧಗಿಸಿತು. ಕಾರ್ಕಳ ಮೂಲದ ವ್ಯಕ್ತಿಯೊಬ್ಬರು ಎಣ್ಣೆಹೊಳೆ ಸೇತುವೆ ಬಳಿ ಬರುತ್ತಿದ್ದಾಗ ವಾಹನ ಸಡನ್ ಆಗಿ ಆಫ್ ಆಗಿದೆ. ಏನಾಗಿದೆ ಎಂದು ಇಳಿದು ನೋಡುವಾಗಲೇ ಬೆಂಕಿ ತಗುಲಿ ಅನಾಹುತ ಸಂಭವಿಸಿದೆ. ಕ್ಷಣಾರ್ಧದಲ್ಲಿ ಬೆಂಕಿ ಧಗಧಗಿಸಿತ್ತು ಸ್ಕೂಟಿ ಸುಟ್ಟು ಕರಕಲಾಗಿದೆ.
ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚೆಗೆ ಕೆಲವು ವಿದ್ಯುತ್ ಚಾಲಿತ ವಾಹನಗಳು ಬ್ಯಾಟರಿ ಸಮಸ್ಯೆಯಿಂದ ಬೆಂಕಿಗಾಹುತಿ ಆಗುವ ಸಮಸ್ಯೆ ಕಂಡುಬರುತ್ತಿತ್ತು. ಇದೊಂದು ವಿಶೇಷ ಪ್ರಕರಣವಾಗಿದೆ.