Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ
    ಇತ್ತೀಚಿನ ಸುದ್ದಿ

    ಮಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ

    September 3, 2025
    Share

    ಮಂಗಳೂರು : ನಗರದ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿ ಸುನೀಲ್ ಎಂದು ತಿಳಿದು ಬಂದಿದೆ.

    ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ಸಹಿತ ಸೊತ್ತುಗಳನ್ನು ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ದಿನಾಂಕ: 01-09-2025 ರಂದು ಸಂಜೆ:4-00 ಗಂಟೆಗೆ ಮಂಗಳೂರು ನಗರದ ಬರ್ಕೆ ಪೊಲೀಸ್ ಠಾಣೆಯ ಉಪ ನಿರೀಕ್ಷಕ ವಿನಾಯಕ ರವರಿಗೆ ಬಾತ್ಮೀದಾರರೊಬ್ಬರಿಂದ ಮಂಗಳೂರು ನಗರದ ಸುಲ್ತಾನ್ ಭತ್ತೇರಿ ಎಂಬಲ್ಲಿ ಒಬ್ಬ ವ್ಯಕ್ತಿಯು KA-19 HJ1184 ನೇ ಬಿಳಿ ಬಣ್ಣದ ಸ್ಕೂಟರ್ ನಲ್ಲಿ ಅಕ್ರಮವಾಗಿ ಗಾಂಜಾ ಎಂಬ ಮಾದಕ ವಸ್ತುವನ್ನು ಇಟ್ಟು ಕೊಂಡು ಮಾರಾಟ ಮಾಡಲು ಬರುತ್ತಿದ್ದಾನೆಂದು ಮಾಹಿತಿ ಬಂದಂತೆ ಸಂಜೆ 7-15 ಗಂಟೆಗೆ ದಾಳಿ ನಡೆಸಿದಾಗ ಆರೋಪಿ ಸುನೀಲ್ ನು ಎನ್.ಡಿ.ಪಿ.ಎಸ್ ಕಾಯ್ದೆಯನ್ನು ಉಲ್ಲಂಘಿಸಿ ಅಕ್ರಮ ಲಾಭ ಗಳಿಸಲು ಯಾವುದೇ ಪರವಾನಿಗೆ ಇಲ್ಲದೇ ಆರೋಗ್ಯಕ್ಕೆ ಹಾನಿಕಾರಕವಾದ ಒಟ್ಟು 1 ಕೆಜಿ 394 ಗ್ರಾಂ ತೂಕದ ವಾಣಿಜ್ಯ ಪ್ರಮಾಣದ ನಿಷೇದಿತ ಗಾಂಜಾ ಎಂಬ ಮಾಧಕ ವಸ್ತುವನ್ನು ಅಕ್ರಮವಾಗಿ ವಶದಲ್ಲಿರಿಸಿಕೊಂಡು ಮಾರಾಟ ಮಾಡಲು ತಂದಿರುವುದು ಪತ್ತೆಯಾಗಿದ್ದು, ಆರೋಪಿತನು ಎನ್.ಡಿ.ಪಿ.ಎಸ್ ಕಾಯ್ದೆಯಂತೆ ಅಪರಾಧ ಎಸಗಿದ್ದು, ದಾಳಿ ನಡೆಸಿ ಆರೋಪಿಯನ್ನು ಮತ್ತು ವಶಪಡಿಸಿಕೊಂಡ ಸೊತ್ತುಗಳಾದ (1) 25 ಗ್ರಾಂ ತೂಕದ ಗಾಂಜಾ ಪ್ಯಾಕೇಟ್-3, (2) 431 ಗ್ರಾಂ ತೂಕ ಗಾಂಜಾ (3) 888 ಗ್ರಾಂ ತೂಕದ ಗಾಂಜಾ (4) ಖಾಕಿ ಬಣ್ಣದ ಗಮ್ ಟೆಪ್ ನಿಂದ ಸುತ್ತಿದ ಪ್ಯಾಕೇಟ್-1 (5) ಡಿಜಿಟಲ್ ತೂಕ ಮಾಪನ (6) ಪಾರದರ್ಶಕ ಜಿಪ್ ಲಾಕ್ ಕವರ್ ಗಳು-6 (7) ರೂ. 500/- ನಗದು ಹಣ (8) ನೀಲಿ ಬಣ್ಣದ ಪರ್ಸ್-1, (9) KA-19 HJ1184 ನೇ ಬಿಳಿ ಬಣ್ಣದ ಸ್ಕೂಟರ್ -1 ಗಳನ್ನು ವಶಪಡಿಸಿಕೊಂಡಿದ್ದಾರೆ.

    Post Views: 134

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.