ಉಡುಪಿ: ಉಡುಪಿ ನಗರದಲ್ಲಿ ಸರಣಿ ಕಳ್ಳತನ ನಡೆದಿದ್ದು ನಗರದ ಜನತೆ ಬೆಚ್ಚಿ ಬಿದ್ದಿದ್ದಾರೆ. ಉಡುಪಿಯ ಪೊಲೀಸ್ ಸ್ಟೇಷನ್ ಎದುರೇ ಇರುವ ಸರ್ಕಾರಿ ನೌಕರರ ವಸತಿ ಸಮುಚ್ಚಯದಲ್ಲಿ ಈ ಘಟನೆ ಸಂಭವಿಸಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ವಸತಿ ಸಮುಚ್ಚಯದ ಸುಮಾರು ಆರು ಮನೆಗಳಿಗೆ ಕಳ್ಳರು ನುಗ್ಗಿದ್ದು ,ನಗದು ಮತ್ತು ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ವಿಷಯ ತಿಳಿದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು ಮಾಹಿತಿ ಕಲೆ ಹಾಕುತ್ತಿದ್ದಾರೆ. ಆರು ಮನೆಗಳಿಗೆ ನುಗ್ಗಿದ ಕಳ್ಳರು, ನಾಲ್ಕು ಮನೆಗಳಲ್ಲಿ ಕಳ್ಳತನದ ವಿಫಲ ಯತ್ನ ನಡೆಸಿದ್ದಾರೆ. ಒಂದು ಮನೆಯಿಂದ 120 ಗ್ರಾಂ ಚಿನ್ನ, 20,000 ನಗದು ಕಳ್ಳತನ ಮಾಡಿದ್ದಾರೆ .ಮತ್ತೊಂದು ಮನೆಯಿಂದ 20,000 ನಗದು ಕಳ್ಳತನ ಮಾಡಿದ್ದಾರೆ. ವಾರಾಂತ್ಯದ ಎರಡು ರಜೆಗಳಿದ್ದ ಕಾರಣ ಇವರೆಲ್ಲ ಮನೆಗೆ ಬೇಗ ಹಾಕಿ ತೆರಳಿದ್ದರು. ಮನೆಯಲ್ಲಿ ವಾಸ್ತವ್ಯ ಇಲ್ಲದ್ದನ್ನು ಗಮನಿಸಿ ಕಳ್ಳತನಗೈಯಲಾಗಿದೆ. ಅಂದಹಾಗೆ ,ವಸತಿ ಸಮುಚ್ಚಯದ ಆಸುಪಾಸಿನಲ್ಲಿ ಯಾವುದೇ ಸಿಸಿ ಕ್ಯಾಮೆರಾಗಳಿರಲ್ಲ ಎಂಬುದು ಗಮನಾರ್ಹ ಸಂಗತಿ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ.