ಕಡಬ: 13ವರ್ಷಗಳಿಂದ ತಲೆಮರೆಸಿಕೊಂಡಿದ್ದ ಹಲ್ಲೆ ಪ್ರಕರಣವೊಂದರ ಆರೋಪಿಯೊಬ್ಬನನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿ ಪಡೂರು ಗ್ರಾಮದ ನೆಲಪಾಲ ನಿವಾಸಿ ಶ್ರೀಶ ಎಂದು ತಿಳಿದು ಬಂದಿದೆ.

2010ರ ಎ.15 ರಂದು ಸವಣೂರು ಪೇಟೆಯಲ್ಲಿ ಅಟ್ಟೋಳೆಯ ಶೇಷಪ್ಪ ಎಂಬವರಿಗೆ ತಂಡವೊಂದು ಹಲ್ಲೆ ಮಾಡಿತ್ತು.
ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಿದರೂ ಓರ್ವ ಆರೋಪಿಯಾದ ಶ್ರೀಶ ತಲೆಮರೆಸಿಕೊಂಡಿದ್ದ.ಇದೀಗ ಹದಿಮೂರು ವರ್ಷಗಳ ಬಳಿಕ ಕಡಬ ಪೊಲೀಸರು ಸುರತ್ಕಲ್ ನಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.