ಮಂಗಳೂರು: ಅಪ್ರಾಪ್ತ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಶಿಕ್ಷೆಗೆ ಗುರಿಯಾದ ಆರೋಪಿ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಫಕ್ಕೀರಪ್ಪ ಹಣಮಪ್ಪ ಮಾದರ(51) ಎಂದು ಗುರುತಿಸಲಾಗಿದೆ.
ದಿನಾಂಕ 06-08-2024 ರಂದು ಜೋಕಟ್ಟೆ ಬಾಡಿಗೆ ಮನೆಯೊಂದರಲ್ಲಿ ತನ್ನ ಚಿಕ್ಕಪ್ಪನೊಂದಿಗೆ ವಾಸವಾಗಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಲೈಂಗಿಕ ಹಲ್ಲೆ ನಡೆಸಿ, ಕೊಲೆ ಮಾಡಿದ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಫಕ್ಕೀರಪ್ಪ ಹಣಮಪ್ಪ ಮಾದರ(51) ನನ್ನು ಬಂಧಿಸಿದ್ದರು. ಇದೀಗ ಆತನ ಆರೋಪ ಸಾಬೀತಾಗಿದ್ದು ಆತನಿಗೆ ನ್ಯಾಯಾಲಯವು ಕಲಂ: 103(1) {ಕೊಲೆ} ಬಿ ಎನ್ ಎಸ್ ಕಾಯ್ದೆ ಅಡಿಯಲ್ಲಿ ಮರಣದಂಡನೆ ಶಿಕ್ಷೆ,, ಕಲಂ: 4(2) { ಲೈಂಗಿಕ ಹಲ್ಲೆ} ಪೊಕ್ಸ್ ಕಾಯ್ದೆ ಅಡಿಯಲ್ಲಿ ಅಜೀವ ಕಾರಾವಾಸ ಮತ್ತು 50 ಸಾವಿರ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿ 4 ತಿಂಗಳ ಕಾರಗೃಹ ಶಿಕ್ಷೆ ಮತ್ತು ಕಲಂ: 332(ಎ) {ಅಪರಾಧಿಕ ಆತಿ ಕ್ರಮಣ } ಬಿ ಎನ್ ಎಸ್ ಕಾಯ್ದೆಯಡಿಯಲ್ಲಿ 50 ಸಾವಿರ ದಂಡ, ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿ 4 ತಿಂಗಳ ಕಾರಗೃಹ ಶಿಕ್ಷೆಯನ್ನು ಪ್ರಕಟಿಸಿ ತೀರ್ಪು ನೀಡಿದೆ.
ಈ ಪ್ರಕರಣದಲ್ಲಿ ಆರೋಪಿ ಜಾಮೀನು ಸಿಗದೆ ಸುಮಾರು 1 ವರ್ಷದಿಂದ ವಿಚಾರಣಾ ಬಂಧಿಯಾಗಿದ್ದ ಸಮಯದಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಆರೋಪಿಯ ಅಪರಾಧ ಸಾಬೀತಾಗಿ ಶಿಕ್ಷೆಯಾಗಿರುವುದಾಗಿದೆ. ಪ್ರಕರಣವು ದಾಖಲಾಗಿ ಕೇವಲ 1 ವರ್ಷ 1 ತಿಂಗಳಿನಲ್ಲಿಯೇ ಸಂಪೂರ್ಣ ಪ್ರಕರಣದ ವಿಚಾರಣೆ ನಡೆದು ತೀರ್ಪು ಪ್ರಕಟಗೊಂಡಿದೆ.
ಪ್ರಕರಣದ ತನಿಖೆಯು ಮಂಗಳೂರು ನಗರದ ಈ ಹಿಂದಿನ




