Facebook Twitter Instagram
    Sunday, March 8
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಬೆಳ್ತಂಗಡಿ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ- ಆರೋಪಿಗಳಿಗೆ 5 ವರ್ಷ ಜೈಲು..!
    ಇತ್ತೀಚಿನ ಸುದ್ದಿ

    ಬೆಳ್ತಂಗಡಿ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ- ಆರೋಪಿಗಳಿಗೆ 5 ವರ್ಷ ಜೈಲು..!

    December 10, 2024
    Share

    ಬೆಳ್ತಂಗಡಿ: ಆಟೋರಿಕ್ಷಾದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗಳಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ಪೋಕ್ಸ್) ಎಫ್ಟಿಎಸ್‌ಸಿ 1 ನ್ಯಾಯಾಲಯದ ನ್ಯಾಯಾಧೀಶರಾದ ಡಿ. ವಿನಯ್ ಅವರು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.


    ಇಳಂತಿಲ ಗ್ರಾಮದ ನಿವಾಸಿ ಅಬ್ದುಲ್ ಕರೀಂ (39) ಹಾಗೂ ಮೊಗ್ರು ಗ್ರಾಮದ ಅಟೋ ಚಾಲಕ ಸಾಧಿಕ್ (34) ಶಿಕ್ಷೆಗೆ ಒಳಗಾದವರಾಗಿದ್ದಾರೆ. ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು 2023ರ ಜೂನ್ 18ರಂದು ಬಂದಾರು ಗ್ರಾಮದ ನೇಲೋಳ್ಪಲ್ಕೆ ಎಂಬಲ್ಲಿಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಕುಂಟಾಲ ಎಂಬಲ್ಲಿಗೆ ತಲುಪುವ ವೇಳೆ ಅಟೋರಿಕ್ಷದಲ್ಲಿ ‌ಬಂದ ಆರೋಪಿಗಳು ರಿಕ್ಷಾವನ್ನು ನಿಲ್ಲಿಸಿದ್ದು ಆಕೆಯೂ ರಿಕ್ಷಾದಲ್ಲಿ ಹತ್ತಿದ್ದಾಳೆ. ರಿಕ್ಷಾದಲ್ಲಿ ತೆರಳುವ ವೇಳೆ ರಿಕ್ಷಾದಲ್ಲಿದ್ದ ಕರೀಂ ಎಂಬಾತ ಆಕೆಯ ಮೈಮೇಲೆ ಕೂಹಾಕಿ ದೌರ್ಜನ್ಯ ನಡೆಸಿದ್ದಾನೆ, ಈ ವೇಳೆ ಭಯಗೊಂಡ ಬಾಲಕಿ ರಿಕ್ಷಾದಿಂದ ಹಾರಿದ್ದಾಳೆ ರಸ್ತೆಗೆ ಬಿದ್ದ ಬಾಲಕಿ ಗಾಯಗೊಂಡಿದ್ದಳು ಈ ವೇಳೆ ರಿಕ್ಷಾ ನಿಲ್ಲಿಸದೆ ಪರಾರಿಯಾಗಿದ್ದರು.


    ಈ ಬಗ್ಗೆ ಬಾಲಕಿಯ ದೂರಿನಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ವಿಚಾರೇ ನಡೆಸಿದ ನ್ಯಾಯಾಲಯವು ಒಂದನೇ ಆರೋಪಿ ಅಬ್ದುಲ್ ಕರೀಂಗೆ ಪೋಕೋ ಕಾಯ್ದೆಯ ಕಲಂ 8ರ ಅಡಿಯಲ್ಲಿ 5 ವರ್ಷಗಳ ಜೈಲು ಮತ್ತು 5,000 ರೂ. ದಂಡ, ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 6 ತಿಂಗಳ ಸಾದಾ ಸಜೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯಿದೆಯ ಕಲಂ 3(1)(ಡಬ್ಲ್ಯು)(ಐ) ಅಡಿಯಲ್ಲಿ 5 ವರ್ಷ ಸಾದಾ ಸಜೆ ಮತ್ತು 5,000 ರೂ.ದಂಡ, ಒಂದು ವೇಳೆ ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 6 ತಿಂಗಳ ಸಜೆ, ಅಲ್ಲದೆ ಪರಿಶಿಷ್ಟ ಜಾತಿ. ಪಂಗಡದವರ ದೌರ್ಜನ್ಯ ತಡೆ ಕಾಯ್ದೆಯ ಕಲಂ 3(2)(ವಿಎ) ಮತ್ತು ಭಾರತೀಯ ದಂಡ ಸಂಹಿತೆ ಕಲಂ 354ಎ(1)(ಐ) ಅಡಿಯಲ್ಲಿ 3 ವರ್ಷ ಜೈಲು ಶಿಕ್ಷೆ ಮತ್ತು 5,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 3 ತಿಂಗಳ ಜೈಲು ಶಿಕ್ಷೆ ವಿಧಿಸಿದ್ದಾರೆ.

    ಇನ್ನೋರ್ವ ಆರೋಪಿ ಸಾದಿಕ್‌ಗೆ ಪೋಕೋ ಕಾಯ್ದೆಯ ಕಲಂ 8ರಡಿಯಲ್ಲಿ 3 ವರ್ಷಗಳ ಜೈಲು ಮತ್ತು 5,000 ರೂ. ದಂಡ, ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 6 ತಿಂಗಳ ಸಜೆ ವಿಧಿಸಿ ಆದೇಶ ನೀಡಿದ್ದಾರೆ.

    Post Views: 214

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.