ಶಿಬಾಜೆ, : ಇತ್ತೀಚೆಗೆ ನಾಪತ್ತೆಯಾಗಿದ್ದ ಶಿಬಾಜೆ ಗ್ರಾಮದ ಐಂಗುಡ ನಿವಾಸಿ ವಾಸು ರಾಣ್ಯ (83) ಕಾಡಿನಲ್ಲಿ ಪತ್ತೆಯಾಗಿದ್ದಾರೆ. ವಾಸು ಅವರು ಅವರ ಮನೆಯ ಮೇಲಿನ ಭಾಗದ ಭಂಡಿ ಹೊಳೆಕಾಡಿನ ಸುಮಾರು ೩ ಕಿ.ಮೀ ದೂರದ ಅರಣ್ಯದಲ್ಲಿ ಮೇ.26 ರಂದು ಪತ್ತೆಯಾಗಿದ್ದಾರೆ
ಕೂ ಎಂಬ ಶಬ್ದ ಕೇಳಿ ಸ್ಥಳೀಯರು ಮತ್ತು ಶೌರ್ಯ ವಿಪತ್ತು ನಿರ್ವಹಣಾ ತಂಡದವರು ಪುನಃ ಹುಡುಕಾಟ ನಡೆಸಿದಾಗ ಅವರ ಮನೆಯ ಮೇಲಿನ ಭಾಗದ ಭಂಡಿ ಹೊಳೆಕಾಡಿನ ಮದ್ಯಾಹ್ನ ಪತ್ತೆಯಾಗಿದ್ದಾರೆ.ಕೂ ಕೂ ಕೂಗಿನ ಶಬ್ದವನ್ನು ಸ್ಥಳೀಯರು ಗಮನಿಸಿ ಮೇ 26ರಂದು ಮುಂಜಾನೆಯಿಂದ ಹುಡುಕಾಟ ಆರಂಭಿಸಿದ್ದು ವಾಸು ರಾಣ್ಯರನ್ನು ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ನಂತರ ವಾಸು ಅವರವರನ್ನು ತಪಾಸಣೆಗಾಗಿ ಕೊಕ್ಕಡ ಸರಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಲಾಯಿತು ಕಳೆದ ಮಂಗಳವಾರ ಕಟ್ಟಿ ಗೆ ತರಲೆಂದು ಮನೆ ಸಮೀಪದ ಗುಡ್ಡೆಗೆ ಹೋಗಿದ್ದರು ಇದೀಗ ಆರು ದಿನಗಳ ಬಳಿಕ ತಮ್ಮ ಮನೆ ಸೇರಿಕೊಂಡಿದ್ದಾರೆ. ಆ ಮೂಲಕ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.ವಾಸು ಮೇ 21ರ ಬೆಳಗ್ಗೆ ಕೈಯಲ್ಲೊಂದು ಕತ್ತಿ ಹಿಡಿದು, ಮನೆ ಸಮೀಪವಿರುವ ಗುಡ್ಡಕ್ಕೆ ತೆರಳಿದ್ದರು. ಕಟ್ಟಿಗೆ ತರಲು ಹೋಗಿರಬಹುದು ಎಂದು ಮನೆಯವರು ಸುಮ್ಮನಿದ್ದರು. ಮಧ್ಯಾಹ್ನದವರೆಗೂ ವಾಸು ರಾಣ್ಯ ಮನೆಗೆ ಬರದೇ ಇದ್ದಾಗ, ಸ್ಥಳೀಯರ ಜೊತೆ ಹುಡುಕಾಟ ನಡೆಸಿದರು. ಐದು ದಿನಗಳ ಕಾಲ ಸುತ್ತಮುತ್ತ ಹುಡುಕಿದರೂ ವಾಸು ಪತ್ತೆಯಾಗಿರಲಿಲ್ಲವಾಸು ಅವರ ಆರೋಗ್ಯವಾಗಿದ್ದು , ತನ್ನನ್ನು ಯಾರೋ ಬಾ ಬಾ ಎಂದು ಕರೆದಂತಾಯಿತು. ಹಾಗಾಗಿ ಧ್ವನಿಯ ಹಿಂದೆ ನಾನು ಹೋದೆ. ಆಹಾರವನ್ನೇನೂ ತಾನು ತೆಗೆದುಕೊಳ್ಳದೆ ಕೇವಲ ನೀರು ಮಾತ್ರ ಕುಡಿಯುತ್ತಿದ್ದೆ ಎಂದು ಕನವರಿಕೆಯಂತೆ ಹೇಳುತ್ತಿದ್ದಾರೆ. ವಾಸು ನಾಪತ್ತೆಯಾದ ದಿನ ಈ ಪರಿಸರದಲ್ಲಿ ವಿಪರೀತ ಗುಡುಗು ಮಿಂಚು ಮಳೆ ಬಂದಿದ್ದರೂ ಆ ಸಮಯದಲ್ಲಿ ಒಬ್ಬಂಟಿಯಾಗಿ ಕಾಡಲ್ಲೇ ಇದ್ದರು ಎನ್ನಲಾಗಿದೆ. ಅವರನ್ನು ಪತ್ತೆಹಚ್ಚಿದ ಸ್ಥಳದಲ್ಲಿ ಎಲೆಗಳನ್ನು ರಾಶಿಹಾಕಲಾಗಿತ್ತು