Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಶಿಶಿಲ ಶಿಬಾಜೆಯಲ್ಲಿ ಹತೋಟಿಯತ್ತ ಕಾಳ್ಗಿಚ್ಚು: ನೌಕಾಪಡೆ ತಂಡದಿಂದ ಸರ್ವೇಗೆ ಆಗ್ರಹ
    ಇತ್ತೀಚಿನ ಸುದ್ದಿ

    ಶಿಶಿಲ ಶಿಬಾಜೆಯಲ್ಲಿ ಹತೋಟಿಯತ್ತ ಕಾಳ್ಗಿಚ್ಚು: ನೌಕಾಪಡೆ ತಂಡದಿಂದ ಸರ್ವೇಗೆ ಆಗ್ರಹ

    March 12, 2023
    Share

    ಬೆಳ್ತಂಗಡಿ: ಮಿಯಾರು ಮೀಸಲು ಅರಣ್ಯ ಸಹಿತ ಶಿಬಾಜೆಯಲ್ಲಿ ವಾರದಿಂದ ಸುಡುತ್ತಿದ್ದ ಕಾಳ್ಗಿಚ್ಚು ಶಾಂತರೂಪ ಪಡೆದಿದೆ. ಆದರೆ ಮತ್ತೆ ಅರಣ್ಯವನ್ನು ಆಹುತಿ ಪಡೆಯುವ ಮುನ್ನ ಗೋವಾದ ನೌಕಾಪಡೆ ತಂಡವು ಅರಣ್ಯ ಸಮೀಕ್ಷೆ ನಡೆಸಿ ಜಿಲ್ಲಾ ಕೇಂದ್ರದಲ್ಲಿ ಬೆಂಕಿ ನಂದಿಸಲು ಕನಿಷ್ಠ 2 ಹೆಲಿಕಾಪ್ಟರ್‌ಗಳನ್ನು ನಿಯೋಜಿಸುವಂತೆ ಸಾರ್ವಜನಿಕ ವಲಯದಿಂದ ಆಗ್ರಹ ಕೇಳಿಬಂದಿದೆ.

    ಕುದುರೆಮುಖ ವನ್ಯಜೀವಿ ವಿಭಾಗ ಸಹಿತ ಶಿಶಿಲ, ಶಿಬಾಜೆ, ಮಿಯಾರು, ಸವಣಾಲು, ಶಿರ್ಲಾಲು ವ್ಯಾಪ್ತಿಯ ಮೇಲ್ಭಾಗದ ಅರಣ್ಯ ಬೆಂಕಿಯ ಜ್ವಾಲೆಗೆ ಅಕ್ಷ ರಶಃ ಸುಟ್ಟು ಕರಕಲಾಗಿದೆ. ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳ, ಸ್ಥಳೀಯ ತಂಡಗಳ ನಿರಂತರ ಕಾರ್ಯಾ ಚರಣೆಯಿಂದ ಬೆಂಕಿ ಶಮನದ ಹಂತದಲ್ಲಿದೆ.

    ಹೆಲಿಕಾಪ್ಟರ್‌ ಬಳಕೆ: ಅಭಿಯಾನ ಮುಂದುವರಿಕೆ
    ಮಂಗಳೂರು: ಹೆಲಿಕಾಪ್ಟರ್‌ ಬಳಸಿ ಕಾಳ್ಗಿಚ್ಚು ನಂದಿಸುವಂತೆ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಮುಂದುವರಿದಿದೆ.

    ಈ ಕುರಿತು ಮಾ. 10ರಂದು “ಉದಯವಾಣಿ’ ವರದಿ ಮಾಡಿದ್ದು, ಬಹಳಷ್ಟು ಮಂದಿ ವರದಿಯನ್ನು ಟ್ವೀಟ್‌ ಮಾಡಿದ್ದರು. ಪ್ರಧಾನಿ ಮತ್ತು ಮುಖ್ಯಮಂತ್ರಿ ಕಚೇರಿಗೂ ಟ್ಯಾಗ್‌ ಮಾಡಿದ್ದರು. ಸಿಎಂ ಕಚೇರಿ ಯಿಂದಲೇ ಈ ಕುರಿತು ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದ್ದರು.

    ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ಸ್ಪಂದಿಸಿ, ಹೆಲಿಕಾಪ್ಟರ್‌ ಮೂಲಕ ಅಗ್ನಿಶಮನ ಕಾರ್ಯ ನಡೆಸುವಂತೆ ಸಿಎಂಗೆ ಪತ್ರ ಬರೆದಿದ್ದಾರೆ. ಜಿಲ್ಲಾಧಿಕಾರಿ ರವಿಕುಮಾರ್‌ ಎಂ.ಆರ್‌. ಕೂಡ ಈ ಕುರಿತು “ಉದಯವಾಣಿ’ ಜತೆ ಮಾತನಾಡಿ, ವಿಚಾರದ ಗಂಭೀರತೆಯ ಅರಿವಿದೆ, ಈ ಬಗ್ಗೆ ತತ್‌ಕ್ಷಣ ಅರಣ್ಯಾಧಿಕಾರಿಗಳೊಂದಿಗೆ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವೆ ಎಂದು ತಿಳಿಸಿದ್ದಾರೆ.

    Post Views: 194

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.