Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: ಜು.13ರಿಂದ ಪದವು ಶ್ರೀ ಶನೈಶ್ಚರ ದೇವಸ್ಥಾನದ ಸಂಗ್ರಹ ಅಭಿಯಾನ
    ಇತ್ತೀಚಿನ ಸುದ್ದಿ

    ಮಂಗಳೂರು: ಜು.13ರಿಂದ ಪದವು ಶ್ರೀ ಶನೈಶ್ಚರ ದೇವಸ್ಥಾನದ ಸಂಗ್ರಹ ಅಭಿಯಾನ

    July 7, 2025
    Share

    ಮಂಗಳೂರು: “ಧಾರ್ಮಿಕ ಸೇವಾ ಚಟುವಟಿಕೆಗಳ ಮೂಲಕ ಕರಾವಳಿಯಲ್ಲಿ ಸಂಚಲನ ಮೂಡಿಸಿರುವ ಹಿಂದೂ ಯುವ ಸೇನೆಯ ಪದವು ಶಾಖೆಯು ಕಳೆದ ಎರಡೂವರೆ ದಶಕಗಳ ಪೂರ್ವದಲ್ಲಿ ಮಂಗಳೂರಿನ ಕುಲಶೇಖರ ಪದವು ಮೇಗಿನ ಮನೆ ಪರಿಸರದಲ್ಲಿ ನಿರ್ಮಿಸಿದ್ದ ಶ್ರೀ ಶನೈಶ್ಚರ ಮಂದಿರವನ್ನು ದೇವಸ್ಥಾನ ಸ್ವರೂಪದಲ್ಲಿ ಪುನರ್ ನಿರ್ಮಾಣ ಮಾಡುವ ಸಂಕಲ್ಪದೊಂದಿಗೆ ದೇವಸ್ಥಾನ ನಿರ್ಮಾಣ ಶಿಲಾನ್ಯಾಸ ನೆರವೇರಿಸಲಾಗಿದೆ. ಶ್ರೀ ದುರ್ಗಾ ದೇವಿ ಹಾಗೂ ಮಹಾಗಣಪತಿ ಗುಡಿ ಸಹಿತ ಶ್ರೀ ಶನಿ ದೇವರ ದೇವಸ್ಥಾನ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ನವೆಂಬರ್ 2025ರಲ್ಲಿ ಪ್ರತಿಷ್ಠೆ ಬ್ರಹ್ಮಕಲಶ ನಡೆಸಲಾಗುವುದು“ ಎಂದು ಅಧ್ಯಕ್ಷ ಕದ್ರಿ ನವನೀತ್ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.


    ”ಈಗಾಗಲೇ ಮಂದಿರದ ಸಮೀಪ 8 ಸೆಂಟ್ಸ್ ಸ್ಥಳವನ್ನು ಖರೀದಿ ಮಾಡಲಾಗಿದ್ದು ಇನ್ನೂ ಹೆಚ್ಚುವರಿ 10 ಸೆಂಟ್ಸ್ ಜಮೀನು ಖರೀದಿ ಮಾಡುವ ಯೋಜನೆ ಇದೆ.


    ಈ ಯೋಜನೆಗೆ ಒಟ್ಟು ಮೂರು ಕೋಟಿ ರೂಪಾಯಿ ವೆಚ್ಚ ತಗಲಲಿದೆ. ದೇವಸ್ಥಾನದ ನಿರ್ಮಾಣ ಕಾರ್ಯವು ಊರ ಪರವೂರ ಭಕ್ತರ ಸಹಾಯದಿಂದ ಭರದಿಂದ ಸಾಗುತ್ತಿದ್ದು ಮುಂದಿನ ಕೆಲಸ ಕಾರ್ಯಗಳಿಗೆ ಆರ್ಥಿಕ ಕ್ರೋಡಿಕರಣವಾಗಬೇಕಾಗಿದೆ.


    2018ರಲ್ಲಿ ಪದವು ಶನೈಶ್ಚರ ಪೂಜಾ ಸಮಿತಿ ಟ್ರಸ್ಟ್‌ನ ನೇತೃತ್ವದಲ್ಲಿ 7 ದಿನ ಪರ್ಯಂತ ಜರಗಿದ್ದ ಚಾರಿತ್ರಿಕ ಶ್ರೀ ಸಗ್ರಹಮುಖ ಶನೈಶ್ಚರ ಮಹಾಯಾಗದಲ್ಲಿ ಪಾಲ್ಗೊಂಡಿದ್ದ ಸಾವಿರಾರು ಸ್ವಯಂಸೇವಕರ, ಭಕ್ತರ ಭಕ್ತಿಯ ಫಲಶ್ರುತಿಯಿಂದಾಗಿ ಶನಿದೇವರ ದೇವಸ್ಥಾನವು ನಿರ್ಮಾಣವಾಗುತ್ತಿದೆ“ ಎಂದವರು ಹೇಳಿದರು.


    ಈ ದೆಶೆಯಲ್ಲಿ ಗ್ರಾಮದ ಜನರಿಂದ ತನು ಮನ ಧನದ ಸಹಕಾರವನ್ನು ಯಾಚಿಸುತ್ತಿದ್ದು ಜು.13ರಂದು ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದ್ದು ಇದಕ್ಕಾಗಿ 11 ವಲಯ ಸಮಿತಿಗಳನ್ನು ರಚಿಸಲಾಗಿದೆ ಎಂದರು.
    ಪತ್ರಿಕಾಗೋಷ್ಟಿಯಲ್ಲಿ ಗೌರವಾಧ್ಯಕ್ಷ ಮೋನಪ್ಪ ಭಂಡಾರಿ, ಪ್ರಧಾನ ಕಾರ್ಯದರ್ಶಿ ಕಿಶೋರ್ ಕೊಟ್ಟಾರಿ, ಮಾತೃ ಮಂಡಳಿ ಅಧ್ಯಕ್ಷೆ ವಿಜಯ ಅರುಣ್ ಮತ್ತಿತರರು ಉಪಸ್ಥಿತರಿದ್ದರು.

    Post Views: 205

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.