Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಧರ್ಮಸ್ಥಳ ಪ್ರಕರಣ; ಯುಟ್ಯೂಬರ್‌ಗಳ ವಿಚಾರಣೆ ಮುಗಿಸಿದ SIT
    ಇತ್ತೀಚಿನ ಸುದ್ದಿ

    ಧರ್ಮಸ್ಥಳ ಪ್ರಕರಣ; ಯುಟ್ಯೂಬರ್‌ಗಳ ವಿಚಾರಣೆ ಮುಗಿಸಿದ SIT

    September 11, 2025
    Share

    ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೊಳಗಾಗಿದ್ದ ಯುಟ್ಯೂಬರ್‌ಗಳಾದ ಅಭಿಷೇಕ್ ಹಾಗೂ ಮನಾಫ್ ಅವರ ವಿಚಾರಣೆಯನ್ನು ಹಾಗೂ ಹೇಳಿಕೆ ದಾಖಲಿಸುವ ಕಾರ್ಯವನ್ನು ಎಸ್.ಐ.ಟಿ ತಂಡ ಬುಧವಾರ ಪೂರ್ಣಗೊಳಿಸಿದೆ. ಯುಟ್ಯೂಬರ್ ಅಭಿಷೇಕ್ ಅವರನ್ನು ಕಳೆದ ಒಂದು ವಾರದಿಂದ ಎಸ್.ಐ.ಟಿ ತಂಡ ವಿಚಾರಣೆ ನಡೆಸಿತ್ತು. ಇವರಿಂದ ಮೊಬೈಲನ್ನು ವಶಪಡಿಸಿಕೊಂಡಿರುವುದಾಗಿ ತಿಳಿದು ಬಂದಿದೆ. ಬಂಗ್ಲೆ ಗುಡ್ಡದಿಂದ ತಲೆ ಬುರುಡೆ ತೆಗೆಯುವ ವಿಡಿಯೋವನ್ನು ಇವರು ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಈತನ ವಿಚಾರಣೆ ನಡೆಸಿ ಹೇಳಿಕೆ ಪಡೆಯುವ ಕಾರ್ಯ ಪೂರ್ಣಗೊಂಡಿದೆ.

    ಕಳೆದ ಮೂರು ದಿನಗಳಿಂದ ಕೇರಳದ ಯುಟ್ಯೂಬರ್ ಮನಾಫ್ ಅವರ ವಿಚಾರಣೆ ನಡೆಯುತ್ತಿತ್ತು. ಬುಧವಾರ ರಾತ್ರಿಯ ವೇಳೆಗೆ ಅವರ ವಿಚಾರಣೆ ಹಾಗೂ ಹೇಳಿಕೆ ನೀಡುವ ಕಾರ್ಯ ಪೂರ್ಣಗೊಂಡಿದ್ದು, ಅವರು ಹಿಂತಿರುಗಿದ್ದಾರೆ. ವಿಚಾರಣೆ ಮುಗಿಸಿ ಹೊರಬಂದ ಮನಾಫ್ ಮಾತನಾಡಿ, “ಎಸ್.ಐ.ಟಿ ತನಿಖೆ ಅತ್ಯಂತ ಉತ್ತಮ‌ ರೀತಿಯಲ್ಲಿ ನಡೆಯುತ್ತಿದೆ. ನಮ್ಮಲ್ಲಿ ಕೇಳಿದ ಎಲ್ಲ ಮಾಹಿತಿಗಳನ್ನು ನೀಡಿದ್ದೇವೆ. ವಿಚಾರಣೆ ಹಾಗೂ ಹೇಳಿಕೆ ಪಡೆಯುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನು ವಿಚಾರಣೆಗೆ ಬರಲು ಸೂಚಿಸಿಲ್ಲ” ಎಂದು ತಿಳಿಸಿದರು.

    Post Views: 89

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.