ಕಾರ್ಕಳ : ಕಾರ್ಕಳದ ಉಮಿಕಲ್ ನಲ್ಲಿರುವ ಪರುಶುರಾಮ ಪ್ರತಿಮೆಯ ರಿಯಾಲಿಟಿ ಚೆಕ್ ಗೆ ಆಗ್ರಹಿಸಿ ಕಳೆದ 8 ದಿನಗಳಿಂದ ದಿವ್ಯಾನಾಯಕ್ ನೇತೃತ್ವದಲ್ಲಿ ನಡೆಯುತ್ತಿದ್ದ ಉಪವಾಸ ಸತ್ಯಾಗ್ರಹ ಆರೋಗ್ಯ ಏರುಪೇರಾದ ಹಿನ್ನಲೆ ಹಿಂತೆಗೆದುಕೊಳ್ಳಲಾಗಿದೆ.
ಬೈಲೂರು ಪರಶುರಾಮ ಮೂರ್ತಿಯ ಗುಣಮಟ್ಟ ಪರಿಶೀಲನೆಯಾಗಬೇಕೆಂದು ಆಗ್ರಹಿಸಿ ಕಳೆದ 8 ದಿನಗಳಿಂದ ದಿವ್ಯಾ ನಾಯಕ್ ನೇತೃತ್ವದ ತಂಡ ತಾಲೂಕು ಕಚೇರಿ ಮುಂಭಾಗದಲ್ಲಿ ಅನಿರ್ಧಿಷ್ಠಾವಧಿ ಉಪವಾಸ ಸತ್ಯಾಗ್ರಹ ಕೈಗೊಂಡಿತ್ತು. ಇಂದು ದಿವ್ಯಾ ನಾಯಕ್ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಪ್ರತಿಭಟನೆಯನ್ನು ಹಿಂತೆಗೆದುಕೊಂಡಿತು.ದಿವ್ಯಾ ನಾಯಕ್ ಮತ್ತು ವಿವೇಕ್ ಶೆಟ್ಟಿ ಉಪವಾಸದಲ್ಲಿದ್ದು, ಪರಶುರಾಮ ಮೂರ್ತಿಯ ಗುಣಮಟ್ಟ ಪರಿಶೀಲನೆ ಯಾವತ್ತು ನಡೆಸುತ್ತಾರೆ ಎಂದು ಜಿಲ್ಲಾಧಿಕಾರಿಯವರು ದಿನಾಂಕ ತಿಳಿಸುವವರೆಗೆ ಉಪವಾಸವನ್ನು ಕೈ ಬಿಡುವುದಿಲ್ಲ ಎಂದಿದ್ದರು.
ಆದರೆ ಇಂದು ದಿವ್ಯಾ ನಾಯಕ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಈ ಹಿನ್ನೆಲೆ ವೈದ್ಯಕೀಯ ಪರಿಶೀಲನೆ ನಡೆಸಿ ವರದಿಯನ್ನು ತಹಶೀಲ್ದಾರಿಗೆ ನೀಡಲಾಗಿತ್ತು. ಈ ಕುರಿತು ತಹಶೀಲ್ದಾರರು ಜಿಲ್ಲಾಧಿಕಾರಿಯವರಿಗೆ ಮಾಹಿತಿ ನೀಡಿದ್ದು, ನಂತರ ಪ್ರತಿಭಟನಕಾರರ ಮನವಿಯಂತೆ ಜಿಲ್ಲಾಧಿಕಾರಿಯವರಿಗೆ ಫೋನ್ ಕರೆ ಮಾಡಿಕೊಡಲಾಯಿತು. ಫೋನ್ ಕರೆಯಲ್ಲಿ ಮಾತನಾಡಿದ ಡಿಸಿ ಪ್ರತಿಭಟನಕಾರರಲ್ಲಿ ಉಪವಾಸ ಬಿಡುವಂತೆ ಮನವಿ ಮಾಡಿದರು. ಆರೋಗ್ಯದ ದೃಷ್ಟಿಯಲ್ಲಿ ತಂಡ ಇಂದು ಎಳನೀರನ್ನು ಸೇವಿಸುವ ಮೂಲಕ ಉಪವಾಸವನ್ನು ಹಿಂತೆಗೆದುಕೊಂಡಿತು.