ಸುಬ್ರಮಣ್ಯ: ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಹೃದಯಾಘಾತವಾಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಜೂನ್ 28 ಶನಿವಾರ ನಡೆದಿದೆ.
ಐನೆಕಿದು ಗ್ರಾಮದ ಕುಜುಂಬಾರು ನಿವಾಸಿ ಡೀಕಯ್ಯ ಉಪ್ಪಳಿಕೆ(55) ಮೃತ ವ್ಯಕ್ತಿ. ಜೂನ್ 28 ಶನಿವಾರ ಸಂಜೆ ಸುಬ್ರಮಣ್ಯ ಬಸ್ ನಿಲ್ದಾಣದಲ್ಲಿದ್ದಾಗ ಅವರಿಗೆ ಹೃದಯಾಘಾತವಾಗಿದೆ. ಕೂಡಲೇ ಅವನ್ನು ಕಡಬ ಪ್ರಾಥಮಿಕ ಆರೋಗ್ಯ ಕೇಂದ್ರ ಕರೆದೊಯ್ದರೂ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ. ಮೃತರು ಪತ್ನಿ, ತಾಯಿ ಹಾಗೂ ಕುಟುಂಬಸ್ಥರು ಅಗಲಿದ್ದಾರೆ.




