ಸುಳ್ಯ: ಸ್ಕೂಟಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ಕಾಡಾನೆಯೊಂದು ದಾಳಿ ಮಾಡಿದ್ದು, ಅದೃಷ್ಟವಶಾತ್ ಸವಾರ ಪ್ರಾಣಾಪಾಯದಿಂದ ಪಾರಾದ ಘಟನೆ ದೇವರ ಕೊಲ್ಲಿಯಲ್ಲಿಯ 10ನೇ ಮೈಲಿನಲ್ಲಿ ಜ.4 ರಂದು ನಡೆದಿದೆ.
ದೇವರಕೊಲ್ಲಿಯ ಸ್ಥಳೀಯ ನಿವಾಸಿ ಮುತ್ತು ಕಾಡಾನೆ ದಾಳಿಗೊಳಗಾದ ವ್ಯಕ್ತಿ.ಮುತ್ತು ಅವರು ಎಸ್ಟೇಟ್ ನಲ್ಲಿ ರಾತ್ರಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದು, ಬೆಳಗ್ಗೆ ಸ್ಕೂಟಿಯಲ್ಲಿ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ಕಾಡಾನೆಯೊಂದು ದಿಡೀರ್ ದಾಳಿ ಮಾಡಿದೆ.ಈ ಸಂದರ್ಭ ಮುತ್ತು ಓಡಿ ತಪ್ಪಿಸಿಕೊಂಡಿದ್ದು, ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಡಾನೆಯು ಸ್ಕೂಟಿಯನ್ನು ಜಖಂಗೊಳಿಸಿದ್ದು, ಗಾಯಳುವನ್ನು ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.