ಮಂಗಳೂರು: ಮನೆಯಲ್ಲಿದ್ದ ಇಬ್ಬರು ಹಿರಿಯ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕದ್ರಿ ಕಂಬಳದ ಚಂದ್ರಿಕಾ ಬಡಾವಣೆಯಲ್ಲಿ ನಿನ್ನೆ ಸಂಜೆ ನಡೆದಿದೆ.
ಮೃತರನ್ನು ಸುಂದರಿ ಶೆಟ್ಟಿ (80), ಲತಾ ಭಂಡಾರಿ (70) ಎಂದು ಗುರುತಿಸಲಾಗಿದೆ.
ಘಟನೆ ವಿವರ
ಮೃತ ಲತಾ ಭಂಡಾರಿಯ ಪತಿ ಜಗನ್ನಾಥ್ ಭಂಡಾರಿ ಹಾಗೂ ಅಕ್ಕ ಸುಂದರಿ ಶೆಟ್ಟಿಯ ಜೊತೆ ವಾಸವಾಗಿದ್ದರು. ಎಂದಿನಂತೆ ನಿನ್ನೆಯೂ ಜಗನ್ನಾಥ್ ಭಂಡಾರಿ ಕೆಲಸದ ನಿಮಿತ್ತ ಹೊರ ಹೋಗಿದ್ದರು. ಸಂಜೆ ವೇಳೆ ಮನೆಗೆ ಬಂದಾಗ ಬಾಗಿಲು ಮುಚ್ಚಿಕೊಂಡಿತ್ತು. ಅನುಮಾನಗೊಂಡ ಅವರು ಕಿಟಕಿಯಿಂದ ನೋಡಿದಾಗ ಇಬ್ಬರೂ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಇಬ್ಬರೂ ಒಂದೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಅನುಮಾನ ಕಾಡುತ್ತಿದ್ದು, ಪ್ರಾಥಮಿಕ ಮೂಲಗಳ ಪ್ರಕಾರ ಕೌಟುಂಬಿಕ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.