ಕೇರಳ: ಎರ್ನಾಕುಲಂನ ಪ್ರಾರ್ಥನಾ ಮಂದಿರವೊಂದರಲ್ಲಿ ಸುಧಾರಿತ ಐಇಡಿ ಸ್ಪೋಟಕವನ್ನು ಸ್ಪೋಟಿಸಿ, ಸರಣಿ ಸ್ಪೋಟಕವನ್ನು ನಡೆಸಲಾಗಿತ್ತು. ಇಂತಹ ಕನ್ವೆನ್ಷನ್ ಸೆಂಟರ್ ನಲ್ಲಿ ಬಾಂಬ್ ಇಟ್ಟಿದ್ದು ನಾನೇ ಅಂತ ತಪ್ಪೊಪ್ಪಿಕೊಂಡಿರುವಂತ ವ್ಯಕ್ತಿಯೋರ್ವ, ಪೊಲೀಸರಿಗೆ ಶರಣಾಗಿರೋದಾಗಿ ತಿಳಿದು ಬಂದಿದೆ.
ಕೇರಳದ ಎರ್ನಾಕುಲಂ ಬಳಿಯಲ್ಲಿ ಕ್ರೈಸ್ತ ಸಮುದಾಯದವರ ಪ್ರಾರ್ಥನೆಯ ವೇಳೆಯಲ್ಲಿ ಸರಣಿ ಸ್ಪೋಟಕ ಪ್ರಕರಣ ಸಂಭವಿಸಿತ್ತು. ಈ ಘಟನೆಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿ 28ಕ್ಕೆ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹೀಗೆ ಚಿಕಿತ್ಸೆ ಪಡೆಯುತ್ತಿರುವಂತ ಅನೇಕರ ಸ್ಥಿತಿ ಕೂಡ ಗಂಭೀರಗೊಂಡಿದೆ ಎನ್ನಲಾಗುತ್ತಿದೆ.
ಈ ಸರಣಿ ಸ್ಪೋಟಕ ಪ್ರಕರಣದ ನಂತ್ರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ನಾಳೆ ಘಟನೆ ಕುರಿತಂತೆ ಮಹತ್ವದ ಚರ್ಚೆ ನಡೆಸೋದಕ್ಕೆ ಬೆಳಗ್ಗೆ 10 ಗಂಟೆಗೆ ಸರ್ವಪಕ್ಷಗಳ ಸಭೆಯನ್ನು ಕರೆಯಲಾಗಿದೆ.
ಮತ್ತೊಂದೆಡೆ ಸಿಎಂ ಪಿಣರಾಯಿ ವಿಜಯನ್ ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಕರೆ ಮಾಡಿ, ಸ್ಪೋಟಕ ಪ್ರಕರಣ ಸಂಬಂಧ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ ಘಟನೆಯ ಕುರಿತಂತೆ ಎನ್‌ಐಎ, ಎನ್‌ಎಸ್ ಜಿ ತಂಡದಿಂದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ತನಿಖೆ ಕೈಗೊಳ್ಳುವಂತೆಯೂ ಸೂಚಿಸಿದ್ದಾರೆ.
ಈ ಬೆನ್ನಲ್ಲೇ ಕೊಚ್ಚಿ ಮೂಲಕ ವ್ಯಕ್ತಿಯೋರ್ವ ಕೇರಳದ ಎರ್ನಾಕುಲಂ ಪ್ರಾರ್ಥನಾ ಮಂದಿರದಲ್ಲಿನ ಸರಣಿ ಸ್ಪೋಟಕಕ್ಕೆ ನಾನೇ ಕಾರಣ. ಪ್ರಾರ್ಥನಾ ಮಂದಿರದಲ್ಲಿ ಬಾಂಬ್ ಇಟ್ಟಿದ್ದು ನಾನೇ ಅಂತ ಒಪ್ಪಿಕೊಂಡು, ಶಂಕಿತ ವ್ಯಕ್ತಿಯೋರ್ವ ಪೊಲೀಸರಿಗೆ ಶರಣಾಗಿದ್ದಾನೆ. ಆತನನ್ನು ವಶಕ್ಕೆ ಪಡೆದಿರುವಂತ ಕೇರಳ ಪೊಲೀಸರು ತೀವ್ರವಾಗಿ ಘಟನೆ ಸಂಬಂಧ ತನಿಖೆಯನ್ನು ನಡೆಸುತ್ತಿದ್ದಾರೆ.