Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಉಡುಪಿ: ಕರ್ತವ್ಯ ಲೋಪ- ಕೋಟ ಎಸ್ ಐ ಗುರುನಾಥ ಹಾದಿಮನಿ ಅಮಾನತು
    ಇತ್ತೀಚಿನ ಸುದ್ದಿ

    ಉಡುಪಿ: ಕರ್ತವ್ಯ ಲೋಪ- ಕೋಟ ಎಸ್ ಐ ಗುರುನಾಥ ಹಾದಿಮನಿ ಅಮಾನತು

    September 13, 2024
    Share

    ಉಡುಪಿ: ಉಡುಪಿ ಜಿಲ್ಲೆಯ ಕೋಟ ಪೊಲೀಸ್ ಠಾಣಾ ಎಸ್ ಐ , ಗುರುನಾಥ ಹಾದಿಮನಿ ಅವರನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ಅರುಣ್ . ಕೆ ಆದೇಶ ಮಾಡಿದ್ದಾರೆ.ಅಕ್ರಮ ಮರಳುಗಾರಿಕೆ ಪ್ರಕರಣವೊಂದರ ಸಂಬಂಧ ವರಿಷ್ಠಾಧಿಕಾರಿಗಳು, ಅಮಾನತು ಆದೇಶ ಮಾಡಿದ್ದಾರೆ. ಉಡುಪಿಗೆ ಡಾ. ಅರುಣ್ ಅವರು, ವರಿಷ್ಠಾಧಿಕಾರಿಯಾದ ನಂತರ ಇಲಾಖೆಯಲ್ಲಿ ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ಸತತ ಅಮಾನತು ಮಾಡಲಾಗುತ್ತಿದೆ. ಈಗಾಗಲೇ 4 ಮಂದಿ ಎಸ್‌ಐಗಳು ಸಹಿತ 80 ಕ್ಕೂ ಅಧಿಕ ಸಿಬಂದಿಗಳು ಅಮಾನತುಗೊಂಡಿದ್ದಾರೆ. ಜಿಲ್ಲೆೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯದಲ್ಲಿದ್ದ 4 ಮಂದಿ ಎಸ್‌ಐಗಳಾದ ಗುರುನಾಥ ಹಾದಿಮನೆ, ಶಂಭುಲಿಂಗ, ಅಶೋಕ್ , ಸುಷ್ಮಾ ಅಮಾನತು ಮಾಡಲಾಗಿದ್ದು, ಈ ಪೈಕೆ ಕೆಲವು ಮಂದಿಯ ಅಮಾನತು ಆದೇಶ ಮುಕ್ತಾಯಗೊಂಡಿದ್ದು, ಹಿಂದೆ ಸೇವೆ ಸಲ್ಲಿಸುತ್ತಿದ್ದ ಠಾಣೆ ಬಿಟ್ಟು ಬೇರೆ ಠಾಣೆಗಳಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದಾರೆ. ಪೊಲೀಸ್ ಕರ್ತವ್ಯ ಹೊರತುಪಡಿಸಿ ಇತರ ಕರ್ತವ್ಯ ನಡೆಸಿ ಇಲಾಖಾ ಕರ್ತವ್ಯ ಲೋಪದ ಹಿನ್ನಲೆಯಲ್ಲಿ ಕೆಲವರ ಮೇಲೆ ಈಗಾಗಲೇ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ. ಈ ಪ್ರಕ್ರಿಯೆ ನಿರಂತರ ಜಾರಿಯಲ್ಲಿರಲಿದೆ. ಪೊಲೀಸರು ಕಾನೂನು ಸುವ್ಯವಸ್ಥೆೆಗೆ ಒತ್ತು ನೀಡುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಎಸ್ ಪಿ ಮಾಹಿತಿ ನೀಡಿದ್ದಾರೆ.

    Post Views: 151

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.