ನವದೆಹಲಿ: ಬಿಜೆಪಿ ನಾಯಕ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ಭಾರತದ ಪ್ರಧಾನಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಭವ್ಯ ಕಾರ್ಯಕ್ರಮದಲ್ಲಿ ನೆರೆಯ ದೇಶಗಳ ನಾಯಕರು ಮತ್ತು ಗಣ್ಯರು ಸೇರಿದಂತೆ 9,000 ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ.
ಈ ನಡುವೆ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಎನ್ ಡಿಎ ನಾಯಕರಿಗೆ ತಮ್ಮ ನಿವಾಸದಲ್ಲಿ ಚಹಾ ಕೂಟ ಏರ್ಪಡಿಸಿದ್ದಾರೆ. ಈ ಚಹಾಕೂಟದಲಿ ಅಮಿತ್ ಶಾ, ರಾಜನಾಥ್ ಸಿಂಗ್, ನಿತೀಶ್ ಕುಮಾರ್, ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ.
ಎನ್ಡಿಎ ಮಿತ್ರಪಕ್ಷಗಳ ಬೆಂಬಲದೊಂದಿಗೆ ರಚನೆಯಾಗಲಿರುವ ಮೋದಿ ಕ್ಯಾಬಿನೆಟ್ 3.0 ರಲ್ಲಿ, ತೆಲುಗು ದೇಶಂ ಪಕ್ಷದ ನಾಯಕರಿಗೆ ಎರಡು ಸ್ಥಾನಗಳು, ಎನ್ಸಿಪಿ (ಅಜಿತ್ ಪವಾರ್) ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ತಲಾ ಒಂದು ಸ್ಥಾನ ಸಿಗಲಿದೆ. ಇದಲ್ಲದೆ, ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಅವರ ಹೆಸರುಗಳು ಕ್ಯಾಬಿನೆಟ್ನಲ್ಲಿ ಸಚಿವ ಸ್ಥಾನಕ್ಕೆ ದೃಢಪಟ್ಟಿವೆ. ಅವರು ತಮ್ಮ ಖಾತೆಗಳನ್ನು ಉಳಿಸಿಕೊಳ್ಳುವ ಸಾಧ್ಯತೆಯಿದೆ.