ಮಂಗಳೂರು: ನವೀನ ಶೈಲಿಯ ಆಭರಣಗಳ ಬ್ರ್ಯಾಂಡ್ ಗಳಲ್ಲಿ ಒಂದಾದ ತನಿಷ್ಕ್ ಮಂಗಳೂರಿನಲ್ಲಿ ತನ್ನ ನೂತನ ಮಳಿಗೆಯ ಶೋ ರೂಂ ಅನ್ನು ಟಾಟಾ ಸನ್ಸ್ ಲಿಮಿಟೆಡ್ ನಿರ್ದೇಶಕ ಭಾಸ್ಕರ್ ಭಟ್ ಮತ್ತು ಮಿಯಾ ಬೈ ತನಿಷ್ಕನ ಉದ್ದಿಮೆ ಮುಖ್ಯಸ್ಥೆ ಶ್ಯಾಮಲಾ ರಮಣನ್ ಅವರು ಅ. 15 ರಂದು ಉದ್ಘಾಟನೆ ಮಾಡಿದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ತನಿಷ್ಕ್ ನ ದಕ್ಷಿಣದ ಪ್ರಾದೇಶಿಕ ವ್ಯಾಪಾರ ವ್ಯವಸ್ಥಾಪಕರಾದ ವಾಸುದೇವ ರಾವ್, ನಮ್ಮ
ಕರ್ನಾಟಕದ ಮಂಗಳೂರು ತನಿಷ್ಕ್ ಶೋರೂಂ ಅನ್ನು ಇಂದು ಭವ್ಯವಾಗಿ ಪುನರಾರಂಭಿಸಿರುವುದಾಗಿ ಘೋಷಿಸಲು ನಾವು
ಸಂತೋಷಪಡುತ್ತೇವೆ. ತನಿಷ್ಕ್ ನಲ್ಲಿ ಗ್ರಾಹಕರ ತೃಪ್ತಿಯನ್ನು ಖಚಿತಪಡಿಸುವುದು ನಮ್ಮ ಪ್ರಮುಖ ಬದ್ಧತೆಯಾಗಿದೆ. ಈ ಪ್ರದೇಶದಲ್ಲಿ
ಪ್ರೀತಿಯ ಆಭರಣ ಬ್ರ್ಯಾಂಡ್ ಆಗಿ ನಮ್ಮ ಉತ್ಪನ್ನಗಳನ್ನು ಎಲ್ಲರಿಗೂ ಸುಲಭವಾಗಿ ಲಭ್ಯವಾಗುವಂತೆ ಮಾಡಲು ನಾವು ಸತತವಾಗಿ
ಶ್ರಮಿಸುತ್ತೇವೆ. ಹೊಸದಾಗಿ ನವೀಕರಿಸಿದ ಮಂಗಳೂರು ಶೋರೂಮ್ ಚಿನ್ನ ಮತ್ತು ವಜ್ರದ ಆಭರಣಗಳ ಸೊಗಸಾದ ಸಂಗ್ರಹವನ್ನು
ಒದಗಿಸುತ್ತದೆ. ಇದರಲ್ಲಿ ಬೆರಗುಗೊಳಿಸುವ ಸಾಲಿಟೇರ್ಗಳು, ಬಣ್ಣದ ಹರಳುಗಳು ಪ್ರತ್ಯೇಕವಾಗಿ ಸಂಗ್ರಹಿಸಲಾದ ಹಬ್ಬದ ಸಂಗ್ರಹಗಳು
ಮತ್ತು ವಜ್ರಗಳ ವಿಭಾಗಗಳು ಕೂಡಿವೆ. ಈ ಪುನರಾರಂಭವು ನಮ್ಮ ಗ್ರಾಹಕರಿಗೆ ಪ್ರತಿ ಸಂದರ್ಭಕ್ಕೂ ಸಂತೋಷಕರವಾದ ಶಾಪಿಂಗ್
ಅನುಭವವನ್ನು ಒದಗಿಸುವ ತನಿಷ್ಕ್ ನ ಅಚಲವಾದ ಸಮರ್ಪಣೆಗೆ ಸಾಕ್ಷಿಯಾಗಿದ್ದು, ಎಲ್ಲವೂ ಅನುಕೂಲಕರವಾಗಿ ಒಂದೇ ಸೂರಿನಡಿ
ಲಭ್ಯವಾಗಿಲಿದೆ, ಮಂಗಳೂರಿನ ಹೃದಯಭಾಗದಲ್ಲಿ ನಮ್ಮ ರೀಟೆಲ್ ಅಸ್ತಿತ್ವದ ವಿಸ್ತರಣೆಯ ಬಗ್ಗೆ ನಾವು ಉತ್ಸುಕರಾಗಿದ್ದೇವೆ ಮತ್ತು ಈ
ನವೀಕೃತಿ ಸ್ಥಾಪನೆಯಲ್ಲಿ ನಮ್ಮ ಗ್ರಾಹಕರು ಉತ್ಕೃಷ್ಟತೆಯನ್ನು ಅನುಭವಿಸುತ್ತಾರೆ ಎಂದು ಕುಲದಿಂದ ನಿರೀಕ್ಷಿಸುತ್ತೇವೆ’ ಎಂದು ಹೇಳಿದರು.