Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: ಹಾಡಹಗಲೇ ಮನೆಯಿಂದ ನಗದು ಕಳವು
    ಇತ್ತೀಚಿನ ಸುದ್ದಿ

    ಮಂಗಳೂರು: ಹಾಡಹಗಲೇ ಮನೆಯಿಂದ ನಗದು ಕಳವು

    December 31, 2024
    Share

    ಮಂಗಳೂರು: ಮನೆಮಂದಿ ಮನೆಗೆ ಬೀಗ ಹಾಕದೆ ತೋಟಕ್ಕೆ ಹೋಗಿದ್ದಾಗ ಮನೆಗೆ ನುಗ್ಗಿದ ಕಳ್ಳನೋರ್ವ ಕೋಣೆಯ ಶೆಲ್ಫ್ ನಲ್ಲಿಟ್ಟಿದ್ದ 50 ಸಾವಿರ ರೂ.ಗಳ ನೋಟಿನ ಕಟ್ಟನ್ನು ಕಳವು ಮಾಡಿದ ಘಟನೆ ಡಿ. 28ರಂದು ಸಂಜೆ 5.30ರ ಸುಮಾರಿಗೆ ಬಂಟ್ವಾಳದ ಅಂತರ ಮಣಿಗುತ್ತಿನಲ್ಲಿ ನಡೆದಿದೆ. ಅಂತರ ಮಣಿಗುತ್ತು ನಿವಾಸಿ ಪೂರ್ಣಿಮಾ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಸಂಜೆ 5.45ರ ಸುಮಾರಿಗೆ ಮನೆಯ ಬಳಿ ನಾಯಿಗಳು ಬೊಗಳುವ ಶಬ್ದ ಕೇಳಿದ್ದು, ಆಗ ಅವರ ಜತೆಯಲ್ಲಿದ್ದ ಧನುಷ್ ಮನೆಗೆ ಬಂದಾಗ ಅಪರಿಚಿತ ವ್ಯಕ್ತಿ ಮನೆಯ ಒಳಗಿನಿಂದ ಪ್ಲಾಸ್ಟಿಕ್ ಬಾಕ್ಸ್‌ ಹಿಡಿದುಕೊಂಡು ಓಡುತ್ತಿದ್ದಾಗ ಬಾಕ್ಸ್‌ನಲ್ಲಿದ್ದ 500 ರೂ.ಗಳ 4 ಕಟ್ಟುಗಳು ನೆಲಕ್ಕೆ ಬಿದ್ದಿದೆ. ಅದರಲ್ಲಿ 1 ಕಟ್ಟನ್ನು ಆತ ಹೆಕ್ಕಿ ಪರಾರಿಯಾಗಿದ್ದಾನೆ. ಈ ವೇಳೆ ಧನುಷ್ ಬೊಬ್ಬೆ ಹಾಕಿದ್ದು, ತೋಟದಲ್ಲಿದ್ದ ಪೂರ್ಣಿಮಾ ಕೂಡ ಓಡಿ ಬಂದಿದ್ದಾರೆ. ಪೂರ್ಣಿಮಾ ಅವರ ಪತಿ ಸಿಲ್ವೆಸ್ಟರ್ ಡಿ’ಸೋಜಾ ಅವರು ಅಪಘಾತದಲ್ಲಿ ಮೃತಪಟ್ಟಿದ್ದು, ಅದರ ವಿಮೆ ಹಣ ಹಾಗೂ ಅಡಿಕೆ ಮಾರಾಟ ಮಾಡಿದ ಸಿಕ್ಕಿದ ಹಣವನ್ನು ಸೇರಿಸಿ 2 ಲಕ್ಷ ರೂ.ಗಳನ್ನು ಮನೆಯಲ್ಲಿಟ್ಟಿದ್ದರು. ಕಳ್ಳನು ಅದನ್ನು ಕದ್ದು ಓಡುತ್ತಿದ್ದಾಗ ಧನುಷ್ ಬಂದ ಕಾರಣ ಕೈಯಿಂದ ಬಿದ್ದಿದ್ದ 1.50 ಲಕ್ಷ ರೂ. ಗಳು ಮನೆಯವರಿಗೆ ಸಿಕ್ಕಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

    Post Views: 175

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.