Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಕರಾವಳಿ ಸುದ್ದಿ»ಮತ್ತೆ ತಾನೇ ದೈವಸ್ಥಾನಕ್ಕೆ ಕಳ್ಳತನಕ್ಕೆ ಬಂದು ಸಿಕ್ಕಿಬಿದ್ದ ಕಳ್ಳ
    ಕರಾವಳಿ ಸುದ್ದಿ

    ಮತ್ತೆ ತಾನೇ ದೈವಸ್ಥಾನಕ್ಕೆ ಕಳ್ಳತನಕ್ಕೆ ಬಂದು ಸಿಕ್ಕಿಬಿದ್ದ ಕಳ್ಳ

    June 4, 2025
    Share

    ಹೆಬ್ರಿ : ಒಂದು ಬಾರಿ ದೈವಸ್ಥಾನದ ಕಾಣಿಕೆ ಹುಂಡಿ ಕದ್ದಿದ್ದ ಕಳ್ಳ ಮತ್ತೊಮ್ಮೆ ಅದೇ ದೈವಸ್ಥಾನದಲ್ಲಿ ಕಾಣಿಕೆ ಹುಂಡಿ ಕದಿಯಲು ಬಂದು ಸಿಕ್ಕಿಹಾಕಿಕೊಂಡ ಘಟನೆ ಮುದ್ರಾಡಿ ಗ್ರಾಮದ ನಾಟ್ಕದೂರು ಅಭಯಹಸ್ತೆ ಆದಿಶಕ್ತಿ ಶ್ರೀ ಕ್ಷೇತ್ರದಲ್ಲಿ ನಡೆದಿದೆ. ಈ ಹಿಂದೆ ಕಳ್ಳತನ ನಡೆದಾಗ ದೈವ ನೀಡಿದ್ದ ಅಭಯದಂತೆ ಕಳ್ಳ ಸಿಕ್ಕಿದ್ದು ದೈವದ ಕಾರಣಿಕ ಎಂದು ಜನರು ನಂಬಿದ್ದಾರೆ.

    ಮುದ್ರಾಡಿ ಗ್ರಾಮದ ನಾಟ್ಕದೂರು ಅಭಯಹಸ್ತೆ ಆದಿಶಕ್ತಿ ಶ್ರೀ ಕ್ಷೇತ್ರದಲ್ಲಿ ದೇವರ ಹುಂಡಿ ಹಾಗೂ ಕಲ್ಕುಡ ಕಲ್ಲುರ್ಟಿಯ ಕಾಣಿಕೆ ಡಬ್ಬಿಯಿಂದ ಮೇ 25ರಂದು ರಾತ್ರಿ ಕಳ್ಳತನವಾಗಿತ್ತು, ಕಳ್ಳತನೊಬ್ಬ ದೈವಸ್ಥಾನದ ಕಾಣಿಕೆ ಡಬ್ಬಿ ಕಳ್ಳತ ಮಾಡಿದ್ದ, ಬಳಿಕ ಮತ್ತೆ ಜೂನ್ 2 ರಂದು ಮಧ್ಯರಾತ್ರಿ ಮತ್ತೆ ಅದೇ ದೈವಸ್ಥಾನದ ಹುಂಡಿ ಕಳ್ಳತನಕ್ಕೆ ಬಂದಿದ್ದು, ಈ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಿನಲ್ಲಿದ್ದವರು ಕಳ್ಳನನ್ನು ನೋಡಿದ್ದಾರೆ. ಕೂಡಲೇ ಕಾರನ್ನು ನಿಲ್ಲಿಸಿ ಹಿಂದಕ್ಕೆ ಬಂದಾಗ ಆತ ಗೋಡೆ ಹಾರಿ ಬೈಕಿನಲ್ಲಿ ಪರಾರಿ ಯಾಗಿದ್ದ. ಕಾರಿನವರು ಸಮೀಪದ ಮನೆಯ ವರಿಗೆ ವಿಷಯ ತಿಳಿಸಿ ಅವರ ಜತೆಗೂಡಿ ಕಳ್ಳನನ್ನು ಬೆನ್ನಟ್ಟಿ ದರು. ಜತೆಗೆ ಸೋಮೇಶ್ವರ ಮತ್ತು ಆಗುಂಬೆ ಚೆಕ್‌ಪೋಸ್ಟ್ ಗೆ ಮಾಹಿತಿ ನೀಡಿದರು. ಕಳ್ಳ ಆಗುಂಬೆ ತಲುಪಿದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದನು.ವಿಚಾರಿಸಿದಾಗ ದಾವಣಗೆರೆ ಹರಿಹರದ ಸಲ್ಮಾನ್‌ ಎಂದು ಹೇಳಿ ಕೊಂಡಿದ್ದಾನೆ. ಹೆಬ್ರಿ ಪೊಲೀಸರು ಆತನನ್ನು ಬಂಧಿಸಿದ್ದಾರೆ.

    ಹುಂಡಿಯಿಂದ ಕಳವಾದ ಬಗ್ಗೆ ಕ್ಷೇತ್ರದ ಧರ್ಮದರ್ಶಿ ಸುಕುಮಾರ್‌ ಮೋಹನ್‌ ಅವರು ಮೇ 30ರಂದು ನಡೆದ ನೇಮದಲ್ಲಿ ಕಲ್ಕುಡ ಕಲ್ಲುರ್ಟಿ ಮತ್ತು ಕೊರಗಜ್ಜ ದೈವಕ್ಕೆ ದೂರು ನೀಡಿದ್ದರು. 9 ದಿನದೊಳಗೆ ಅತನನ್ನು ತರಿಸಿಕೊಡುತ್ತೇನೆ ಎಂದು ದೈವ ಅಭಯ ನುಡಿದಿತ್ತು. ಆ ಪ್ರಕಾರ ಕೇವಲ 3 ದಿನದ ಒಳಗೆ ಅದೇ ಕಳ್ಳ ಮತ್ತೆ ಕೊರಗಜ್ಜ ದೈವದ ಗುಡಿ ಬಂದು ಸಿಕ್ಕಿಬಿದ್ದಿರುವುದು ದೈವದ ಕಾರಣಿಕ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.

    Post Views: 192

    hebri karnataka theft theif udupi

    Related Posts

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026

    ಮಂಗಳೂರು: ನಿವೃತ್ತ ಬ್ಯಾಂಕ್ ಮಹಿಳಾ ಉದ್ಯೋಗಿಗೆ ಸೈಬರ್ ವಂಚನೆ

    March 6, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.