ಬ್ರಹ್ಮಾವರ ತಾಲೂಕು ವಾರಂಬಳ್ಳಿ ಗ್ರಾಮದ, ಆದರ್ಶ ನಗರದ ಮನೆಯಲ್ಲಿ ವಾಸವಾಗಿರುವ ಪದ್ಮ(70) ಇವರು ದಿನಾಂಕ 26.04.2025 ರಂದು ಬೆಳಿಗ್ಗೆ ತನ್ನ ಮನೆಯ ಕಂಪೌಂಡಿನ ಹೊರಗಡೆ ಕಾಂಕ್ರೀಟ್ ರಸ್ತೆಯಲ್ಲಿ ಹೂವುಗಳನ್ನು ಕೊಯ್ಯುತ್ತಿರುವಾಗ ಒಂದು ಬಿಳಿ ಬಣ್ಣದ ಕಾರು ಅವರ ಬಳಿ ಬಂದು ನಿಂತು, ಅದರರಿಂದ ಕೇಸರಿ ಬಣ್ಣದ ಟೀ ಶರ್ಟ್ ಅನ್ನು ಧರಿಸಿದ ಆರೋಪಿತನು ಕೆಳಗೆ ಇಳಿದಿದ್ದು, ಕಾರಿನಲ್ಲಿದ್ದ ಉಳಿದ 2 ರಿಂದ 3 ಜನ ಆರೋಪಿತರು ಕಾರಿನಲ್ಲಿ ಸ್ವಲ ದೂರ ದೂಪದಕಟ್ಟೆ ಕಡೆಗೆ ಹೋಗಿ ರಸ್ತೆ ಬದಿಯಲ್ಲಿ ನಿಲ್ಲಿಸಿಕೊಂಡಿರುತ್ತಾರೆ. ಆಗ ಸಂತ್ರಸ್ಥೆ ಅವರಿಗೆ ಬೆನ್ನು ಹಾಕಿ ಹೂವುಗಳನ್ನು ಕೀಳುತ್ತಿರುವಾಗ ಶಬ್ದ ಕೇಳಿ ಹಿಂದೆ ತಿರುಗಿದಾಗ ಕಾರಿನಿಂದ ಮೊದಲೇ ಇಳಿದಿದ್ದ ಆರೋಪಿತನು ಹತ್ತಿರ ಬಂದು ಕೈಯಿಂದ ಅವರ ತಲೆಯ ಹಿಂಭಾಗಕ್ಕೆ ಗುದ್ದಿದ್ದು, ಆಗ ಪದ್ಮ ರಸ್ತೆಗೆ ಬಿದ್ದಾಗ ಅವರ ಕೈಯನ್ನು ಆರೋಪಿತನು ಹಿಡಿದು ರಸ್ತೆಯಲ್ಲಿ ಎಳೆದಾಡಿ ಅವರ ತುಟಿಯ ಮೇಲ್ಬಾಗಕ್ಕೆ ಹಾಗೂ ಮುಖದ ಬಲ ಭಾಗಕ್ಕೂ ಗುದ್ದಿ ಅವರ ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ ಸುಮಾರು 40 ಗ್ರಾಮ್ ತೂಕದ ರೂ. 2,50,000/- ಮೌಲ್ಯದ ಚಿನ್ನದ ಕರಿಮಣಿ ಸರವನ್ನು ಹಿಡಿದೆಳೆದು ಬಲವಂತವಾಗಿ ಕಸಿದುಕೊಂಡು ಕಾರಿನ ಕಡೆಗೆ ಓಡಿ ಹೋಗಿ ಕಾರನ್ನು ಹತ್ತಿ ಹೋಗಿರುತ್ತಾರೆ.

ಆರೋಪಿಯು ಮಾಡಿದ ಹಲ್ಲೆ ಯಿಂದ ಅವರ ತುಟಿಯ ಮೇಲ್ಗಡೆ, ಬಲ ಕಣ್ಣಿನ ಕೆಳಗಡೆ ರಕ್ತಗಾಯ ವಾಗಿ ತಲೆಯ ಹಿಂಭಾಗಕ್ಕೆ ಗುದ್ದಿದ ಒಳನೋವು ಉಂಟಾಗಿರುತ್ತದೆ, ಕಾರಿನಲ್ಲಿ ಬಂದು ದರೋಡೆ ಮಾಡಿದ ಆರೋಪಿಗಳ ವಿರುದ್ಧ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 96/2025 U/S. 309(4), 115(2) BNS ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಪ್ರಕರಣದಲ್ಲಿ ಆರೋಪಿಗಳು ಮತ್ತು ಸ್ವತ್ತು ಪತ್ತೆಗಾಗಿ ಗೋಪಿಕೃಷ್ಣ ಕೆ.ಆರ್. ಸಿ.ಪಿ.ಐ ಬ್ರಹ್ಮಾವರ, ಬ್ರಹ್ಮಾವರ ಠಾಣಾ ಪಿ.ಎಸ್ ಐ ಸುದರ್ಶನ್ ದೊಡ್ಡಮನಿ, ಮಹಾಂತೇಶ ಜಾಬಗೌಡ, ಹಿರಿಯಡ್ಕ ಠಾಣಾ ಪಿ.ಎಸ್.ಐ ಪುನೀತ್ ಬಿ.ಇ. ಅಪರಾಧ ಪತ್ತೆ ಸಿಬ್ಬಂದಿಗಳಾದ ಬ್ರಹ್ಮಾವರ ಠಾಣಾ ಸಿಹೆಚ್.ಸಿ ಇಮ್ರಾನ್, ಸಿಪಿಸಿ ಮಹಮ್ಮದ್ ಅಜ್ಮಲ್, ಸಿಪಿಸಿ ಕಿರಣ್, ಕೋಟ ಠಾಣಾ ಸಿಪಿಸಿ ರಾಘವೇಂದ್ರ, ಸಿಪಿಸಿ ವಿಜಯೇಂದ್ರ, ಹಿರಿಯಡ್ಕ ಠಾಣಾ ಸಿಪಿಸಿ ಕಾರ್ತಿಕ್, ಸಿಪಿಸಿ ಹೇಮಂತ್ , ಬ್ರಹ್ಮಾವರ ವೃತ್ತ ಕಛೇರಿಯ ಎ.ಎಸ್ಐ ಕೃಷ್ಣಪ್ಪ, ವಿಶ್ವನಾಥ ಶೆಟ್ಟಿ ತಂಡ ರಚಿಸಲಾಗಿದ್ದು ಆರೋಪಿಗಳನ್ನು, ಉತ್ತರ ಕನ್ನಡ ಜಿಲ್ಲೆಯ ಎಲ್ಲಾಪುರದಲ್ಲಿ ಯಲ್ಲಾಪುರ ಸಿಪಿಐ ರಮೇಶ ಹಾನಾಪುರ, ಯಲ್ಲಾಪುರ ಠಾಣಾ ಪಿ.ಎಸ್.ಐ ಯಲ್ಲಾಲಿಂಗ ಕುನ್ನೂರ, ಸಿಹೆಚ್.ಸಿ ಮಹಮ್ಮದ್ ಶಫಿ ಎ.ಶೇಖ್, ಸಿ.ಪಿ.ಸಿ ಗಿರೀಶ ಲಮಾಣಿ, ಮಪಿಸಿ ಶೋಭಾರವರ ಸಹಕಾರದೊಂದಿಗೆ ಆರೋಪಿಗಳಾದ 1) ಗೌರೀಶ ರೋಹಿದಾಸ್ ಕೆರ್ಕರ್(37), ಪೊರ್ವರ್ಹಿಮಂ, ನಾರ್ತ್ ಗೋವಾ. 2) ಮೈನುದ್ದೀನ್ ಬಾಗಲಕೋಟ್ (31), ಸಿಂಧಗಿ ತಾಲ್ಲೂಕು, , ಬಿಜಾಪುರ ಜಿಲ್ಲೆ ಮತ್ತು 3)ಸುರ್ಜಿತ್ ಗೌತಮ್ ಕಾರ್(27), ವಿಲೆಪಾರ್ಲೆ (ಪ), ಮುಂಬೈ, ಮಹಾರಾಷ್ಟ ಇವರುಗಳನ್ನು ಬಂಧಿಸಲಾಗಿದೆ.
ಆರೋಪಿಗಳನ್ನು ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು